ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಪ್ರಕರಣ ತಗ್ಗಿಸಲು ನಗರದ ಪೊಲೀಸ್ ವ್ಯವಸ್ಥೆಯನ್ನು ಅಮೆರಿಕ ಸರ್ಕಾರದ ಅಡಿಗೆ ತಂದು, ರಾಷ್ಟ್ರೀಯ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಿಳಿಸಿದ್ದಾರೆ.
‘ನಾಗರಿಕ ರಕ್ಷಣೆಯ ತುರ್ತು ಅಗತ್ಯವನ್ನು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ. ಇತರೆ ದೊಡ್ಡ ನಗರಗಳಿಗೆ ಹೋಲಿಸಿದರೆ ವಾಷಿಂಗ್ಟನ್‌ನಲ್ಲಿ ಸುರಕ್ಷಾ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ’ ಎಂದಿದ್ದಾರೆ.
ಇರಾಕ್, ಬ್ರೆಜಿಲ್ ಮತ್ತು ಕೊಲಂಬಿಯಾ ನಗರಗಳಿಗೆ ಹೋಲಿಸಿದರೂ ವಾಷಿಂಗ್ಟನ್‌ನಲ್ಲಿ ಕಳಪೆ ಸ್ಥಿತಿ ಇದೆ ಎಂದು ಹೇಳಿದ್ದಾರೆ.
ರಾಜಧಾನಿಯಲ್ಲಿ ಅಪರಾಧ ಪ್ರಕರಣ ತಗ್ಗುತ್ತಿವೆ ಎಂದು ಮೇಯರ್ ಪ್ರತಿಪಾದಿಸುತ್ತಿರುವ ಸಮಯದಲ್ಲೇ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.