ADVERTISEMENT

ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಲಿರುವ ಜೈಶಂಕರ್‌

ಪಿಟಿಐ
Published 27 ಜುಲೈ 2022, 11:00 IST
Last Updated 27 ಜುಲೈ 2022, 11:00 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ನವದೆಹಲಿ (ಪಿಟಿಐ): ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಉಜ್ಬೇಕಿಸ್ತಾನಕ್ಕೆ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ.

‘ಶಾಂಘೈ ಸಹಕಾರ ಒಕ್ಕೂಟವು (ಎಸ್‌ಸಿಒ) ಇದೇ 27 ಮತ್ತು 28ರಂದು ವಿದೇಶಾಂಗ ಸಚಿವರ ಸಭೆ ಆಯೋಜಿಸಿದೆ. ಇದರಲ್ಲಿ ಜೈಶಂಕರ್‌ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್‌ 15 ಮತ್ತು 16ರಂದು ಸಮರಖಂಡದಲ್ಲಿ ನಡೆಯುವ ಎಸ್‌ಸಿಒ ಸಮ್ಮೇಳನದ ಸಿದ್ಧತೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಚೀನಾದ ವಾಂಗ್‌ ಯಿ, ರಷ್ಯಾದ ಸರ್ಜಿ ಲಾವರೊವ್‌ ಮತ್ತು ಪಾಕಿಸ್ತಾನದ ಬಿಲಾವಲ್‌ ಭುಟ್ಟೊ ಅವರೂ ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.