ADVERTISEMENT

ಅಫ್ಗಾನಿಸ್ತಾನದಲ್ಲಿ ಅರ್ಧ ಗಂಟೆ ಅಂತರದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2024, 2:38 IST
Last Updated 3 ಜನವರಿ 2024, 2:38 IST
 ಭೂಕಂಪ
ಭೂಕಂಪ    (ಪ್ರಾತಿನಿಧಿಕ ಚಿತ್ರ)

ಕಾಬೂಲ್ (ಅಫ್ಘಾನಿಸ್ತಾನ): ಅಫ್ಗಾನಿಸ್ತಾನದ ಫೈಜಾಬಾದ್‌ನಲ್ಲಿ ಬುಧವಾರ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.

ಮೊದಲ ಕಂಪನವು ಮಧ್ಯರಾತ್ರಿ 12.28ಕ್ಕೆ ಫೈಜಾಬಾದ್‌ನಿಂದ 126 ಕಿ.ಮೀ ದೂರದಲ್ಲಿ ಭೂಮಿಯಿಂದ 80 ಕಿಮೀ ಆಳದಲ್ಲಿ ಸಂಭವಿಸಿದೆ.

ಎರಡನೆಯದು ಫೈಜಾಬಾದ್‌ನಿಂದ 100 ಕಿ.ಮೀ ದೂರದಲ್ಲಿ ಮಧ್ಯರಾತ್ರಿ 12.55ಕ್ಕೆ ಭೂಮಿಯಿಂದ 100 ಕಿ.ಮೀ ಆಳದಲ್ಲಿ ಸಂಭವಿಸಿದೆ.

ADVERTISEMENT

ಮೊದಲ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟಿದ್ದರೆ, 2ನೇ ಕಂಪನದ ತೀವ್ರತೆ 4.8ರಷ್ಟಿತ್ತು.

ಈವರೆಗೆ ಯಾವುದೇ ಸಾವು, ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.