ADVERTISEMENT

ಕೋವಿಡ್: ಭಾರತೀಯ –ಅಮೆರಿಕನ್‌ ವೈದ್ಯ ಲೋಧಾ ನಿಧನ

ಪಿಟಿಐ
Published 23 ನವೆಂಬರ್ 2020, 14:13 IST
Last Updated 23 ನವೆಂಬರ್ 2020, 14:13 IST

ನ್ಯೂಯಾರ್ಕ್: ಕೋವಿಡ್‌–19 ಬಾಧಿತರಾಗಿದ್ದ ಭಾರತೀಯ–ಅಮೆರಿಕನ್‌ ವೈದ್ಯ ಅಜಯ್‌ ಲೋಧಾ (58) ನಿಧನರಾದರು.

ಅಮೆರಿಕದಲ್ಲಿರುವ ಭಾರತ ಮೂಲದ ವೈದ್ಯರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಲೋಧಾ ಅವರು ಎಂಟು ತಿಂಗಳುಗಳಿಂದ ಕೋವಿಡ್‌ ವಿರುದ್ಧ ಸೆಣಸಿ ಕ್ಲೇವ್‌ಲ್ಯಾಂಡ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ADVERTISEMENT

‘ಡಾ. ಅಜಯ್‌ ಲೋಧಾ ಅವರ ನಿಧನ ದುಃಖವುಂಟುಮಾಡಿದೆ. ಅವರು ಸದಾ ನಮ್ಮ ಹೃದಯದಲ್ಲಿರುತ್ತಾರೆ. ಅವರ ಮಾನವೀಯತೆ, ನಮ್ರತೆ ಪ್ರೇರಣೆದಾಯಕ’ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಟ್ವೀಟ್‌ ಮಾಡಿದ್ದಾರೆ.

ಲೋಧಾ ಅವರು 2016ರಲ್ಲಿ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಆನರ್‌ಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.