ADVERTISEMENT

15 ಸಾವಿರ ಕೆ.ಜಿ ಕಾಗದದ ಕಸ ಸಂಗ್ರಹಿಸಿದ ಬಾಲಕಿ ಎಮಿರೇಟ್ಸ್ ಪ್ರಶಸ್ತಿ

ಪಿಟಿಐ
Published 11 ಜೂನ್ 2019, 16:35 IST
Last Updated 11 ಜೂನ್ 2019, 16:35 IST

ದುಬೈ: ಪರಿಸರ ಸ್ವಚ್ಛತೆಗಾಗಿ ಶ್ರಮಿಸಿದ ಭಾರತ ಮೂಲದ ವಿದ್ಯಾರ್ಥಿನಿ ನಿಯಾ ಟೋನಿ (8)ಎಮಿರೇಟ್ಸ್ ಪ್ರಶಸ್ತಿ ಪಡೆದಿದ್ದಾಳೆ.

ಎಮಿರೇಟ್ಸ್ಪರಿಸರ ಸಂಸ್ಥೆ ಆಯೋಜಿಸಿದ್ದ ತ್ಯಾಜ್ಯ ಮರುಬಳಕೆ ರಾಷ್ಟ್ರೀಯ ಅಭಿಯಾನದಲ್ಲಿ ನಿಯಾ15,000 ಕೆ.ಜಿ ಕಾಗದದ ಕಸ ಸಂಗ್ರಹಿಸಿದ್ದಕ್ಕೆ ಈ ಗೌರವ ಸಿಕ್ಕಿದೆ. ಈಕೆ ಸ್ವಚ್ಛತಾ ಅಭಿಯಾನದಲ್ಲಿ ನಾಗರಿಕರಿಗೆ ಮಾದರಿಯಾಗಿದ್ದಾಳೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ.

‘ಪ್ರತಿ ವಾರಕ್ಕೊಮ್ಮೆ ನಾನು ಎಲ್ಲ ಮನೆಗಳಿಗೆ ಹೋಗುತ್ತಿದ್ದೆ. ಜನರಿಗೆ ಬೇಡವಾದ ಅಥವಾ ಅವರು ಎಸೆಯಲು ಬಯಸುತ್ತಿದ್ದ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಇತರ ಕಾಗದಗಳನ್ನು ಸಂಗ್ರಹಿಸಿದೆ. ಪ್ರತಿ ಮಕ್ಕಳು ಪರಿಸರ ಸ್ವಚ್ಛಗೊಳಿಸಲು ಶ್ರಮಿಸಿದರೆ ವೃದ್ಧಾಪ್ಯದಲ್ಲೂ ಹಸಿರಿನಭೂಮಿಯನ್ನು ಕಾಣಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.