ADVERTISEMENT

ಕೋವಿಡ್‌ ಸಾಂಕ್ರಾಮಿಕ ಅಂತ್ಯ ಸನಿಹ: ವಿಶ್ವ ಆರೋಗ್ಯ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 16:01 IST
Last Updated 14 ಸೆಪ್ಟೆಂಬರ್ 2022, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೀವಾ: ಕೋವಿಡ್-19 ಸಾಂಕ್ರಾಮಿಕ ರೋಗ ಅಂತ್ಯದ ಸನಿಹದಲ್ಲಿದೆ. 60 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಕೊರೊನಾ ವೈರಸ್ ಅನ್ನು ಸಂಪೂರ್ಣ ಕೊನೆಗಾಣಿಸಲು ಜಗತ್ತು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಒತ್ತಾಯಿಸಿದ್ದಾರೆ.

ಬುಧವಾರ ವರ್ಚುವಲ್‌ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸಾಂಕ್ರಾಮಿಕ ಅಂತ್ಯಗೊಳಿಸುವಂತಹ ಈಗಿನಂತಹ ಉತ್ತಮ ಸ್ಥಿತಿಯಲ್ಲಿ ನಾವು ಈ ಹಿಂದೆಂದೂ ಇರಲಿಲ್ಲ. ಆದರೆ, ಈಗ ಕೊನೆಗಾಣಿಸುವ ಸನಿಹದಲ್ಲಿದ್ದೇವೆ. ನಮ್ಮ ಮುಂದಿರುವ ಅವಕಾಶಗಳನ್ನು ಈಗ ಸರಿಯಾಗಿ ಬಳಸಿಕೊಳ್ಳದಿದ್ದರೆ, ಹೆಚ್ಚಿನ ರೂಪಾಂತರಿಗಳು, ಹೆಚ್ಚು ಸಾವುಗಳು ಹಾಗೂ ಹೆಚ್ಚಿನ ಅನಿಶ್ಚಿತತೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೋವಿಡ್‌ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿವೆ.ಕಳೆದ ವಾರ ಕೋವಿಡ್‌ನಿಂದ ಸಾವನ್ನಪ್ಪಿದ ಪ್ರಕರಣಗಳು ಅತೀ ಕಡಿಮೆ ದಾಖಲಾಗಿವೆ.ಮಂಕಿಪಾಕ್ಸ್ ಪ್ರಕರಣಗಳು ಸಹ ಕಡಿಮೆಯಾಗುತ್ತಿವೆ. ಆದರೆ, ಇದರ ವಿರುದ್ಧದ ಪ್ರಯತ್ನವನ್ನು ಎಲ್ಲ ದೇಶಗಳೂ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.