ADVERTISEMENT

ಜೆರುಸಲೇಂ: ಗುಂಡಿನ ದಾಳಿ, ಏಳು ಸಾವು

ಪಿಟಿಐ
Published 28 ಜನವರಿ 2023, 14:41 IST
Last Updated 28 ಜನವರಿ 2023, 14:41 IST
ಜೆರುಸಲೇಂನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಸ್ಥಳವನ್ನು ಇಸ್ರೇಲ್‌ನ ಪೊಲೀಸರು ಸುತ್ತುವರಿದಿರುವುದು –ಎಎಫ್‌ಪಿ ಚಿತ್ರ
ಜೆರುಸಲೇಂನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಸ್ಥಳವನ್ನು ಇಸ್ರೇಲ್‌ನ ಪೊಲೀಸರು ಸುತ್ತುವರಿದಿರುವುದು –ಎಎಫ್‌ಪಿ ಚಿತ್ರ   

ಜೆರುಸಲೇಂ: ಜೆರುಸಲೇಂ ಪೂರ್ವ ಭಾಗದ ನೆವೆ ಯಾಕೊವ್‌ನಲ್ಲಿ ಪ್ರಾರ್ಥನಾ ಸ್ಥಳದ ಬಳಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡರು.

21 ವರ್ಷದ ಬಂದೂಕುಧಾರಿ, ಪ್ಯಾಲೆಸ್ಟೀನ್‌ನ ನಿವಾಸಿ ಕಾರಿನಲ್ಲಿ ಬಂದಿದ್ದು ಕೃತ್ಯ ಎಸಗಿದ್ದಾನೆ. ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದು, ದಾಳಿಗೆ ಬಳಸಿದ್ದ ಗನ್ ವಶಪಡಿಸಿಕೊಂಡಿದ್ದಾರೆ. ಐವರು ಸ್ಥಳದಲ್ಲಿ ಹಾಗೂ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು.

‘ಇತ್ತೀಚಿನ ವರ್ಷಗಳಲ್ಲಿ ನಡೆದ ಗಂಭೀರ ಸ್ವರೂಪದ ದಾಳಿ ಇದಾಗಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಪ್ರತಿಕ್ರಿಯಿಸಿದರು.

ADVERTISEMENT

ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದು, ಪರಿಹಾರಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ರಕ್ಷಣಾ ಸಚಿವರು ಪರಿಸ್ಥಿತಿ ಅವಲೋಕಿಸಲು ಸೇನಾಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.