ADVERTISEMENT

ಚಂಡಮಾರುತ ಭೀತಿ, ಫ್ಲಾರಿಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 25 ಸೆಪ್ಟೆಂಬರ್ 2022, 11:38 IST
Last Updated 25 ಸೆಪ್ಟೆಂಬರ್ 2022, 11:38 IST
.
.   

ಟಲ್ಲಹಸ್ಸೆ (ಅಮೆರಿಕ): ಕೆರಿಬಿಯನ್ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಚಂಡಮಾರುತ ಫ್ಲಾರಿಡಾ ರಾಜ್ಯದತ್ತ ಸಾಗುತ್ತಿದ್ದು, ತೀವ್ರ ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಫ್ಲಾರಿಡಾ ರಾಜ್ಯದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

‘ಇಯಾನ್‌ ಚಂಡಮಾರುತ ಇಡೀ ರಾಜ್ಯವನ್ನು ವ್ಯಾಪಿಸುವ ಸಾಧ್ಯತೆ ಇದೆ. ಗಂಟೆಗೆ 85 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಬಹುದು. ಯಾವುದೇ ಅನಾಹುತ ಎದುರಿಸಲು ಜನ ಸನ್ನದ್ಧರಾಗಿರಬೇಕು’ ಎಂದು ಫ್ಲಾರಿಡಾದ ಗವರ್ನರ್‌ ರಾನ್‌ ಡೆಸಾಂಟಿಸ್‌ ತಿಳಿಸಿದ್ದಾರೆ.

ಚಂಡಮಾರುತ ಅಪಾಯದ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡನ್‌ ಅವರು ಇದೇ 27ರ ಉದ್ದೇಶಿತ ಫ್ಲಾರಿಡಾ ಭೇಟಿಯನ್ನು ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.