ADVERTISEMENT

ಟರ್ಕಿ ಮಾಜಿ ಪ್ರಧಾನಿ ಮೆಸೂತ್ ಯಿಲ್ಮಾಜ್ ನಿಧನ

ಏಜೆನ್ಸೀಸ್
Published 30 ಅಕ್ಟೋಬರ್ 2020, 12:21 IST
Last Updated 30 ಅಕ್ಟೋಬರ್ 2020, 12:21 IST
ಮೆಸೂತ್ ಯಿಲ್ಮಾಜ್
ಮೆಸೂತ್ ಯಿಲ್ಮಾಜ್   

ಇಸ್ತಾನ್‌ಬುಲ್‌: ಪ್ರಕ್ಷುಬ್ಧ ರಾಜಕೀಯ ಸನ್ನಿವೇಶದಲ್ಲಿ ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಟರ್ಕಿಯ ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕಾರಣಿ ಮೆಸುತ್ ಯಿಲ್ಮಾಜ್ (72) ಶುಕ್ರವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಯಿಲ್ಮಾಜ್‌ ಅವರು2019ರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಇದೇ ವರ್ಷದ ಮೇ ತಿಂಗಳಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಇಸ್ತಾನ್‌ಬುಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು.

1991ರಿಂದ 2002 ತನಕ ಟರ್ಕಿಯ ಮದರ್‌ಲ್ಯಾಂಡ್‌ ಪಕ್ಷವನ್ನು ಮುನ್ನಡೆಸಿದ್ದರು. 1990ರಲ್ಲಿ ಮೂರು ಭಾರಿ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅವರು ಎರಡು ಬಾರಿ ಪ್ರಧಾನಿಯಾಗಿದ್ದಾಗ, ಸಮಿಶ್ರ ಸರ್ಕಾರಗಳು ಪತನಗೊಂಡ ಕಾರಣ, ಕೆಲವು ತಿಂಗಳು ಮಾತ್ರ ಆಳ್ವಿಕೆ ನಡೆಸಿದ್ದರು.

ADVERTISEMENT

ಟರ್ಕಿಯಲ್ಲಿ ಉಂಟಾದ ಉದ್ವಿಗ್ನ ರಾಜಕೀಯ ಪರಿಸ್ಥಿತಿಯಿಂದ, ಅಂದಿನ ಪ್ರಧಾನ ಮಂತ್ರಿ ನೆಕ್ಮೆಟಿನ್ ಎರ್ಬಕನ್ ಅವರ ಸಮ್ಮಿಶ್ರ ಸರ್ಕಾರವನ್ನು ಕೊನೆಗೊಳಿಸಿ, 1997ರಲ್ಲಿ ಮಿಲಿಟರಿ ಆಡಳಿತ ಜಾರಿಯಾಯಿತು. ಅದಾದ ನಂತರ ಯಿಲ್ಮಾಜ್ ತಮ್ಮ ಮೂರನೇ ಸರ್ಕಾರವನ್ನು ರಚಿಸಿದರು. ಆಗ 18 ತಿಂಗಳ ಕಾಲ ಅಧಿಕಾರ ನಡೆಸಿದ್ದರು. ಮಾಜಿ ಪ್ರಧಾನಿ ತುರ್ಗುಟ್‌ ಓಜಾಲ್‌ ಅವರ ಸರ್ಕಾರದಲ್ಲಿ ಯಿಲ್ಮಾಜ್‌ ಅವರು ವಿದೇಶಾಂಗ ಮತ್ತು ಸಾಂಸ್ಕೃತಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.