ಬಂಜುಲ್, ಗಾಂಬಿಯಾ:ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ ಕೆಮ್ಮು ಮತ್ತು ಶೀತ ಸಿರಪ್‌ಗಳ ಸೇವನೆಯಿಂದಾಗಿ ಮೂತ್ರಪಿಂಡ ಸಮಸ್ಯೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದು, ಈ ಸಿರಪ್‌ಗಳನ್ನು ಹಿಂಪಡೆಯಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಈ ಸಂಬಂಧ ಮನೆ ಮನೆಗೆ ತೆರಳಿ, ಕೆಮ್ಮಿನ ಸಿರಪ್‌ನ ಸೀಸೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ, ಆರೋಗ್ಯ ಸಚಿವಾಲಯವು ಅಲ್ಲಿನ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ನೂರಾರು ಯುವಕರ ತಂಡಗಳನ್ನು ರಚಿಸಿದೆ.
‘ತೀವ್ರ ಮೂತ್ರಪಿಂಡ ಸಮಸ್ಯೆಯಿಂದ ಮಕ್ಕಳು ಸಾವಿಗೀಡಾಗಿರುವ ಘಟನೆಯು ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಗಾಂಬಿಯಾದ ಆರೋಗ್ಯ ನಿರ್ದೇಶಕ ಡಾ. ಮುಸ್ತಾಫಾ ಬಿಟ್ಟಾಯೆ ಅವರು ತಿಳಿಸಿದ್ದಾರೆ.
‘ಈ ಘಟನೆಯ ಬಗ್ಗೆ, ಭಾರತದಲ್ಲಿರುವ ಔಷಧ ತಯಾರಕ ಕಂಪನಿ ಮೈಡನ್ ಫಾರ್ಮಾಸ್ಯುಟಿಕಲ್ಸ್‌ನ ಪ್ರಧಾನ ಕಚೇರಿಗೆ ಕಡೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಭಾರತದ ಆರೋಗ್ಯ ಸಚಿವಾಲಯ, ಡಿಸಿಜಿಎ ಉತ್ತರಿಸಲಿಲ್ಲ’ ಎಂದು ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.