ADVERTISEMENT

ಭಾರತದ ಟೂಮ್‌ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನ

ಗೀತಾಂಜಲಿ ಶ್ರೀ ಹಿಂದಿಯಲ್ಲಿ ಬರೆದ ಈ ಪುಸ್ತಕಕ್ಕೆ ಇಂಗ್ಲಿಷ್‌ಗೆ ಭಾಷಾಂತರ

ಪಿಟಿಐ
Published 10 ಮಾರ್ಚ್ 2022, 15:41 IST
Last Updated 10 ಮಾರ್ಚ್ 2022, 15:41 IST
ಗೀತಾಂಜಲಿ ಶ್ರೀ
ಗೀತಾಂಜಲಿ ಶ್ರೀ   

ಲಂಡನ್: ಲೇಖಕಿ ಗೀತಾಂಜಲಿ ಶ್ರೀ ಅವರ "ಟೂಮ್‌ ಆಫ್ ಸ್ಯಾಂಡ್'ಕಾದಂಬರಿಯು ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಿಶ್ವದ 13 ಪುಸ್ತಕಗಳಲ್ಲಿ ಒಂದಾಗಿದೆ. ಈ ಹಿಂದಿ ಕಾದಂಬರಿಯನ್ನು ಡೈಸಿ ರಾಕ್‌ವೆಲ್ ಅವರು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು.

ಇದೇ ಪುಸ್ತಕ ಇದೀಗ 50 ಲಕ್ಷ ರೂಪಾಯಿ ಮೌಲ್ಯದ ಪ್ರಶಸ್ತಿ ವಿಭಾಗದಲ್ಲಿ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಈ ಪುಸ್ತಕ ಬೂಕರ್ ಪ್ರಶಸ್ತಿಗೆ ಭಾಜನವಾದಲ್ಲಿ, ಅದರಿಂದ ಬರುವ ಹಣವು ಲೇಖಕಿ ಮತ್ತು ಅನುವಾದಕಾರರ ಮಧ್ಯೆ ಹಂಚಿಕೆಯಾಗಲಿದೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ಅವರು ಮೂರು ಕಾದಂಬರಿಗಳು ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನಿ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.

ADVERTISEMENT

‘ಟೂಮ್‌ ಆಫ್ ಸ್ಯಾಂಡ್‌’ ಕಾದಂಬರಿಯು ಉತ್ತರ ಭಾರತದ 80 ವರ್ಷದ ವೃದ್ಧೆ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ತೀವ್ರ ಖಿನ್ನತೆಗೆ ಒಳಗಾಗುವುದು ಮತ್ತು ಅದರಿಂದ ಹೊರಬರುವುದು ಸೇರಿದಂತೆ ಹಲವು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.