ADVERTISEMENT

ಅಥೆನ್ಸ್: ದೋಣಿ ಮುಳುಗಿ 22 ಮಂದಿ ವಲಸಿಗರ ಸಾವು

ಏಜೆನ್ಸೀಸ್
Published 3 ನವೆಂಬರ್ 2022, 19:57 IST
Last Updated 3 ನವೆಂಬರ್ 2022, 19:57 IST
   

ಅಥೆನ್ಸ್: ವಲಸಿಗರು ಇದ್ದ ದೋಣಿ ಮುಳುಗಿ ಐವರು ಮಕ್ಕಳು ಸೇರಿ 22 ಮಂದಿ ಮೃತಪಟ್ಟ ಘಟನೆ ಗ್ರೀಕ್‌ ರಾಜಧಾನಿಯ ಪೂರ್ವದಇವಿಯಾ ಮತ್ತು ಆಂಡ್ರೋಸ್ ದ್ವೀಪಗಳ ನಡುವಿನ ಸಾಗರದಲ್ಲಿ ಸಂಭವಿಸಿದೆ.

ಈ ಘಟನೆ ಮಂಗಳವಾರ ನಡೆದಿದೆ. ಕಾಣೆಯಾದ 34 ಮಂದಿಗೆ ಶೋಧ ಮುಂದುವರಿದಿದೆ ಎಂದು ಗ್ರೀಕ್‌ನ ಕರಾವಳಿ ಕಾವಲುಪಡೆ ಗುರುವಾರ ತಿಳಿಸಿದೆ.

ದೋಣಿ ಮುಳುಗಿದಾಗ 12 ಮಂದಿ ಪುರುಷರು ಮಾತ್ರ ಬದುಕುಳಿದಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಈಜಿಕೊಂಡು ಹತ್ತಿರದ ದ್ವೀಪದ ಕಲ್ಲುಬಂಡೆಗಳ ಮೇಲೆ ಆಶ್ರಯ ಪಡೆದಿದ್ದರು.ಟರ್ಕಿಯೆ ದೇಶದ ಕರಾವಳಿಯ ಇಜ್ಮಿರ್‌ನಿಂದ 68 ವಲಸಿಗರು ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.