ADVERTISEMENT

ಮಾ.13ರಂದು ಢಾಕಾಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್‌ ಭೇಟಿ

ಪಿಟಿಐ
Published 26 ಫೆಬ್ರುವರಿ 2025, 13:18 IST
Last Updated 26 ಫೆಬ್ರುವರಿ 2025, 13:18 IST
ಆ್ಯಂಟೊನಿಯೊ ಗುಟೆರಸ್‌
ಆ್ಯಂಟೊನಿಯೊ ಗುಟೆರಸ್‌   

ಢಾಕಾ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರು ಮಾರ್ಚ್‌ 13ರಿಂದ 16ರವರೆಗೆ ಢಾಕಾಗೆ ಭೇಟಿ ನೀಡಲಿದ್ದು, ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಮ್ಯಾನ್ಮಾರ್‌ನಿಂದ ಬಲವಂತವಾಗಿ ಸ್ಥಳಾಂತರಗೊಂಡಿರುವ ರೋಹಿಂಗ್ಯಾಗಳಿಗೆ ಆತಿಥ್ಯ ನೀಡುತ್ತಿರುವ ಬಾಂಗ್ಲಾದೇಶಕ್ಕೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಸಿಗುವಂತೆ ಮಾಡುವ ಪ್ರಯತ್ನವನ್ನು ವಿಶ್ವಸಂಸ್ಥೆಯು ಮುಂದುವರಿಸಲಿದೆ ಎಂದು ಗುಟೆರಸ್‌ ಹೇಳಿದ್ದಾರೆ.

ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್‌ ಯೂನಸ್‌ ಅವರು ಗುಟೆರಸ್‌ ಅವರನ್ನು ಆಹ್ವಾನಿಸಿದ್ದಾರೆ ಎಂದು ಮಾಧ್ಯಮವೊಂದು ಬುಧವಾರ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.