ADVERTISEMENT

ಉಪಾಹಾರದಲ್ಲಿ ಕೂದಲು, ಪತ್ನಿಯ ತಲೆ ಬೋಳಿಸಿದ ಪತಿ!

ಏಜೆನ್ಸೀಸ್
Published 8 ಅಕ್ಟೋಬರ್ 2019, 18:15 IST
Last Updated 8 ಅಕ್ಟೋಬರ್ 2019, 18:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ಉಪಾಹಾರದಲ್ಲಿ ಕೂದಲು ಕಾಣಿಸಿಕೊಂಡಿದ್ದರಿಂದ ಸಿಟ್ಟಿಗೆದ್ದ ಗಂಡ ತನ್ನ ಪತ್ನಿಯ ತಲೆಬೋಳಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪ‍ಡಿಸಿ ಮಹಿಳಾ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಜೋಯ್‌ಪುರಹತ್‌ ಎಂಬಲ್ಲಿ ನಡೆದ ಘಟನೆಯ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಬಳಿಕ, ಆರೋಪಿ ಬಬ್ಲು ಮೊಂಡಲ್‌ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಲು ಮತ್ತು ಅನ್ನ ಸೇರಿಸಿ ತಯಾರಿಸಿದ ಉಪಾಹಾರದಲ್ಲಿ ಮನುಷ್ಯರ ಕೂದಲು ಕಾಣಿಸಿದಾಗ ಸಿಟ್ಟಿಗೆದ್ದ ಬಬ್ಲು, ಬ್ಲೇಡ್‌ ತೆಗೆದುಕೊಂಡು ಪತ್ನಿಯ ತಲೆಕೂದಲು ಬೋಳಿಸಿದ್ದಾನೆ ಎಂದು ಪೊಲೀಸ್‌ ಮುಖ್ಯಸ್ಥ ಶಹ್ರಿಯಾರ್‌ ಖಾನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.