ADVERTISEMENT

ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯ ಸಾಹಿತ್ಯ–ಸಂಸ್ಕೃತಿ ಕುರಿತು ಸಂಶೋಧನೆ

ಪಿಟಿಐ
Published 2 ಏಪ್ರಿಲ್ 2023, 11:19 IST
Last Updated 2 ಏಪ್ರಿಲ್ 2023, 11:19 IST
ಹೂಸ್ಟನ್‌ ವಿಶ್ವವಿದ್ಯಾಲಯದ ಸಭೆಯಲ್ಲಿ ರೇಣು ಖಟೋರ್ (ಬಲದಿಂದ ಎರಡನೆಯವರು) -ಪಿಟಿಐ
ಹೂಸ್ಟನ್‌ ವಿಶ್ವವಿದ್ಯಾಲಯದ ಸಭೆಯಲ್ಲಿ ರೇಣು ಖಟೋರ್ (ಬಲದಿಂದ ಎರಡನೆಯವರು) -ಪಿಟಿಐ   

ಅಮೆರಿಕ: ತಮಿಳು ಭಾಷೆಯ ಸಂಸ್ಕೃತಿ, ಸಾಹಿತ್ಯ ಕುರಿತಂತೆ ಸಂಶೋಧನೆ ನಡೆಸಲು ಭಾರತೀಯ ಸಾಂಸ್ಕೃತಿಕ ಅಧ್ಯಯನ ಪೀಠವನ್ನು ಸ್ಥಾಪಿಸುವ ಸಲುವಾಗಿ ಜ್ಞಾಪಕ ಪತ್ರಕ್ಕೆ ಇಲ್ಲಿನ ಹೂಸ್ಟನ್ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು(ಐಸಿಸಿಆರ್) ಸಹಿ ಹಾಕಿವೆ.

ಈ ಕುರಿತಂತೆ ಹೂಸ್ಟನ್ ವಿಶ್ವವಿದ್ಯಾಲಯದ ಅಧ್ಯಕ್ಷೆ ರೇಣು ಖಟೋರ್ ಮಾತನಾಡಿ, ’ನಾವು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿಗೆ ಕೃತಜ್ಞರಾಗಿದ್ದೇವೆ. ಖಂಡಿತಾ ಇದು ಭಾರತ ಹಾಗೂ ಅಮೆರಿಕದ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ’ ಎಂದರು. ರೇಣು ಅವರು 2008ರಿಂದ ಅಮೆರಿಕದ ಸಮಗ್ರ ಸಂಶೋಧನಾ ವಿಶ್ವವಿದ್ಯಾಲಯಗಳಿಗೆ ಮುಂದಾಳತ್ವ ವಹಿಸಿಕೊಂಡ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ.

ಬೇರೆ ಬೇರೆ ದೇಶಗಳ ಸಂಸ್ಕೃತಿ ಕುರಿತು ನಡೆಸುವ ಸಂಶೋಧನೆಗಳಿಂದ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವರ್ಚಸ್ಸು ಹೆಚ್ಚುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅನುಭವ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಕೀರ್ತಿ ಸಂಪಾದಿಸುತ್ತಾರೆ ಎಂಬುದು ರೇಣು ಅಭಿ‌ಪ್ರಾಯ.

ADVERTISEMENT

ಐಸಿಸಿಆರ್ ಮಂಡಳಿಯು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಅತಿಥಿ ಉಪನ್ಯಾಸಕರಾಗಿ ಭಾರತದಿಂದ ತಮಿಳು ಸಂಸ್ಕೃತಿಯಲ್ಲಿ ಅಧ್ಯಯನ ಮಾಡಿದವರಿಗೆ ಹುದ್ದೆ ಸ್ಥಾಪಿಸಲಿದೆ.

ತಮಿಳು ಭಾಷೆ ವಿಶ್ವದಲ್ಲೇ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದ್ದು, ಅಮೆರಿಕದಲ್ಲಿ ಸುಮಾರು 3,00,000 ತಮಿಳಿಗರಿದ್ದು, ಇಲ್ಲಿ ಮಾತನಾಡುವ ಐದು ಅಗ್ರ ಭಾಷೆಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.