ADVERTISEMENT

ಹಫೀಜ್‌, ಲಖ್ವಿಯನ್ನು ಭಾರತಕ್ಕೆ ಹಸ್ತಾಂತರಿಸಲಿ: ಜೆ.ಪಿ.ಸಿಂಗ್‌ ಒತ್ತಾಯ

ಪಿಟಿಐ
Published 20 ಮೇ 2025, 13:29 IST
Last Updated 20 ಮೇ 2025, 13:29 IST
ಜೆ.ಪಿ.ಸಿಂಗ್‌
ಜೆ.ಪಿ.ಸಿಂಗ್‌   

ಜೆರುಸಲೇಂ: ‘ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿತು. ಹಾಗೆಯೇ ಪಾಕಿಸ್ತಾನವು ಭಯೋತ್ಪಾದಕ ಹಫೀಜ್‌ ಸಯೀದ್‌, ಸಾಜಿದ್‌ ಮೀರ್‌, ಝಕಿಉರ್‌ ರೆಹಮಾನ್‌ ಲಖ್ವಿಯನ್ನು ಹಸ್ತಾಂತರ ಮಾಡಬೇಕು’ ಎಂದು ಇಸ್ರೇಲ್‌ನ ಭಾರತದ ರಾಯಭಾರಿ ಜೆ.ಪಿ.ಸಿಂಗ್‌ ಒತ್ತಾಯಿಸಿದ್ದಾರೆ.

‘ಭಯೋತ್ಪಾದನೆಯು ಜಾಗತಿಕ ಪಿಡುಗಾಗಿದ್ದು, ಅದನ್ನು ನಿಗ್ರಹಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತರಾಗಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಇಸ್ರೇಲ್‌ನ ‘ಐ24’ ಸುದ್ದಿವಾಹಿನಿಗೆ ಸೋಮವಾರ ಸಂದರ್ಶನ ನೀಡಿ ಮಾತನಾಡಿದ ಅವರು, ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ, ಮುಗಿದಿಲ್ಲ’ ಎಂದರು.

ADVERTISEMENT

‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮ ಕೇಳಿದ ನಂತರವೇ ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದರಿಂದ 26 ಅಮಾಯಕರು ‍ಪ್ರಾಣ ಕಳೆದುಕೊಂಡರು. ಇದಾದ ಬಳಿಕ, ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಭಾರತವು ದಾಳಿ ನಡೆಸಿತ್ತು, ಅದಕ್ಕೆ ಪ್ರತಿಯಾಗಿ, ಸೇನಾ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತು. ಭಯೋತ್ಪಾದನೆಯ ಈ ಎಲ್ಲ ಸಮಸ್ಯೆಗಳ ಮೂಲ ಜೈಷ್–ಎ–ಮೊಹಮ್ಮದ್ ಹಾಗೂ ಲಷ್ಕರ್–ಎ–ತಯಬಾ ಸಂಘಟನೆಗಳು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.