
ಪಿಟಿಐ
ಜೈಲು (ಪ್ರಾತಿನಿಧಿಕ ಚಿತ್ರ)
ನ್ಯೂಯಾರ್ಕ್: ವಿಮಾನದ ಬಿಡಿಭಾಗಗಳನ್ನು ಒರೆಗಾನ್‌ನಿಂದ ರಷ್ಯಾಕ್ಕೆ ಅಕ್ರಮವಾಗಿ ರಫ್ತು ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆಗೆ ಅಮೆರಿಕದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ದೆಹಲಿಯ ಸಂಜಯ್ ಕೌಶಿಕ್ (58) ಶಿಕ್ಷೆಗೆ ಗುರಿಯಾದವರು.
‘ತಮಗೆ ಹಾಗೂ ತಾನು ಪ್ರತಿನಿಧಿಸುವ ಭಾರತದ ಕಂಪನಿಗಾಗಿ ಎಂಬ ಕಾರಣ ನೀಡಿ ಈ ಬಿಡಿಭಾಗಗಳನ್ನು ಖರೀದಿ ಮಾಡಲಾಗಿತ್ತು. ಆದರೆ, ಅವುಗಳನ್ನು ರಷ್ಯಾಕ್ಕೆ ರಫ್ತು ಮಾಡುವ ಉದ್ದೇಶದಿಂದ ಖರೀದಿಸಲಾಗಿತ್ತು ಎಂಬುದು ತನಿಖೆ ಬಳಿಕ ಗೊತ್ತಾಯಿತು‘ ಎಂದು ನ್ಯಾಯಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.