ADVERTISEMENT

ಭಾರತಕ್ಕೆ ಅಗತ್ಯ ನೆರವು ತಕ್ಷಣವೇ ರವಾನೆ: ಜೋ ಬೈಡನ್‌

ಪಿಟಿಐ
Published 28 ಏಪ್ರಿಲ್ 2021, 6:13 IST
Last Updated 28 ಏಪ್ರಿಲ್ 2021, 6:13 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ಭಾರತಕ್ಕೆ ಕೋವಿಡ್‌ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ‌ನೆರವುಗಳನ್ನು ಅಮೆರಿಕ ಕಳುಹಿಸಲಿದೆ.ಕಳೆದ ವರ್ಷ ಅಮೆರಿಕ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾಗ ಭಾರತವೂ ನಮಗೆ ಸಹಾಯ ಮಾಡಿತ್ತು’ಎಂದು ಅಧ್ಯಕ್ಷ ಜೋ ಬೈಡನ್‌ ಅವರು ತಿಳಿಸಿದ್ದಾರೆ.

ಈ ಸಂಬಂಧ ಬೈಡನ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಈಚೆಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬೈಡನ್‌ ಅವರು, ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಅಮೆರಿಕವೂ ಇದೆ’ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋ ಬೈಡನ್‌ ಅವರು,‘ರೆಮ್‌ಡಿಸಿವಿರ್‌ ಸೇರಿದಂತೆ ಎಲ್ಲಾ ರೀತಿಯ ಔಷಧಿ ಮತ್ತು ಇತರೆ ನೆರವನ್ನು ಅಮೆರಿಕ ತಕ್ಷಣವೇ ಭಾರತಕ್ಕೆ ಕಳುಹಿಸಲಿದೆ’ ಎಂದರು.

ADVERTISEMENT

‌‘ಲಸಿಕೆ ಉತ್ಪಾದನೆಗೆ ಬೇಕಾಗಿರುವ ಯಂತ್ರೋಪಕರಣವನ್ನು ನಿರ್ಮಿಸಲು ಸಂಬಂಧಪಟ್ಟ ಯಾಂತ್ರಿಕ ಭಾಗಗಳನ್ನು ಭಾರತಕ್ಕೆ ಕಳುಹಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.