ADVERTISEMENT

ಢಾಕಾ: ನವೀಕೃತ ಕಾಳಿಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ

ಪಿಟಿಐ
Published 17 ಡಿಸೆಂಬರ್ 2021, 12:54 IST
Last Updated 17 ಡಿಸೆಂಬರ್ 2021, 12:54 IST
ಢಾಕಾದಲ್ಲಿ ನವೀಕೃತ ಕಾಳಿ ಮಂದಿರವನ್ನು ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರು ಕಾಳಿದೇವಿಗೆ  ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.  –ಪಿಟಿಐ ಚಿತ್ರ
ಢಾಕಾದಲ್ಲಿ ನವೀಕೃತ ಕಾಳಿ ಮಂದಿರವನ್ನು ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರು ಕಾಳಿದೇವಿಗೆ  ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.  –ಪಿಟಿಐ ಚಿತ್ರ   

ಢಾಕಾ: ಇಲ್ಲಿನವೀಕರಿಸಲಾದ ರಮನಾ ಕಾಳಿ ಮಂದಿರವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರು ಶುಕ್ರವಾರ ಉದ್ಘಾಟಿಸಿದರು.

ನಂತರ, ರಾಷ್ಡ್ರಪತಿ ಕೋವಿಂದ ಹಾಗೂ ಪತ್ನಿ ಸವಿತಾ ಕೋವಿಂದ ಅವರು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ, ಧಾರ್ಮಿಕ ವ್ಯವಹಾರಗಳ ಸಹಾಯಕ ಸಚಿವ ಫರೀದ್‌ ಉಲ್‌ ಆಲಂಖಾನ್‌ ಹಾಗೂ ಮಂದಿರದ ಅರ್ಚಕರು ರಾಷ್ಟ್ರಪತಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಬರಮಾಡಿಕೊಂಡರು.

ನಗರದ ಹೃದಯ ಭಾಗದಲ್ಲಿರುವ ಮಂದಿರವನ್ನು 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಪಡೆಗಳು ಧ್ವಂಸಗೊಳಿಸಿದ್ದವು. ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ನೂರಾರು ಜನರನ್ನು ಹತ್ಯೆ ಮಾಡಲಾಗಿತ್ತು.

ADVERTISEMENT

ನೆರವಿಗೆ ಬದ್ಧ: ದೇವಸ್ಥಾನ ಉದ್ಘಾಟಿಸಿದ ನಂತರ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಕೋವಿಂದ ಅವರು, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

‘ಬಾಂಗ್ಲಾದೇಶವು ಬಲಿಷ್ಠ ಆರ್ಥಿಕ ಬೆಳವಣಿಗೆ ಸಾಧಿಸಲು ಮತ್ತು ಹೆಚ್ಚಿನ ಸಮೃದ್ಧಿ ಹೊಂದಲು ನಡೆಸುವ ಪ್ರಯತ್ನಗಳಿಗೆ ನೆರವಾಗಲು ಭಾರತ ಬದ್ಧವಾಗಿದೆ’ ಎಂದು ಹೇಳಿದರು.

‘ಭಾರತೀಯರ ಹೃದಯದಲ್ಲಿ ಬಾಂಗ್ಲಾದೇಶಕ್ಕೆ ವಿಶೇಷ ಸ್ಥಾನವಿದೆ. ಭಾಷೆ– ಸಂಸ್ಕೃತಿಯ ನೆಲೆಗಟ್ಟಿನ ಭದ್ರವಾಗಿ ನಿಂತಿರುವ ವಿಶಿಷ್ಟ ಬಾಂಧವ್ಯ ನಮ್ಮದು. ಎರಡೂ ದೇಶಗಳ ಸಮರ್ಥ ನಾಯಕತ್ವ ಫಲವಾಗಿ ನಮ್ಮ ಸಂಬಂಧ ಮತ್ತಷ್ಟೂ ಗಟ್ಟಿಗೊಂಡಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.