ADVERTISEMENT

ಮಾಲ್ದೀವ್ಸ್‌ಗೆ ಭಾರತದ ನೆರವು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:18 IST
Last Updated 12 ಮೇ 2025, 16:18 IST
   

ಮಾಲೆ: ಮಾಲ್ದೀವ್ಸ್‌ಗೆ ಒಂದು ವರ್ಷದ ಮಟ್ಟಿಗೆ 50 ಮಿಲಿಯನ್ ಅಮೆರಿಕನ್ ಡಾಲರ್ (₹424 ಕೋಟಿ) ಹಣಕಾಸು ನೆರವು ನೀಡುವ ಯೋಜನೆಯನ್ನು ಭಾರತವು ವಿಸ್ತರಿಸಿದೆ. ಭಾರತದ ಈ ನೆರವಿನಿಂದ ಆರ್ಥಿಕ ಸುಧಾರಣೆ ಮತ್ತು ಹಣಕಾಸು ಚೇತರಿಕೆ ಪ್ರಯತ್ನಗಳಿಗೆ ಅನುಕೂಲವಾಗಲಿದೆ ಎಂದು ಮಾಲ್ದೀವ್ಸ್‌ ಹೇಳಿದೆ.

2019ರಿಂದಲೂ ಭಾರತವು ತುರ್ತು ಆರ್ಥಿಕ ನೆರವಿನ ರೂಪದಲ್ಲಿ ಈ ರೀತಿಯ ಸಹಾಯ ಮಾಡುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದ ಭಾರತ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಮಾಲ್ದೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT