ADVERTISEMENT

ಬಿಕ್ಕಟ್ಟಿನ ಸಮಯದಲ್ಲಿ ಶ್ರೀಲಂಕಾದ ಅತಿದೊಡ್ಡ ಸ್ನೇಹಿತ ಭಾರತ: ಅಧ್ಯಕ್ಷ ಗುಣವರ್ಧನಾ

ಪಿಟಿಐ
Published 9 ಫೆಬ್ರುವರಿ 2023, 2:25 IST
Last Updated 9 ಫೆಬ್ರುವರಿ 2023, 2:25 IST
ಶ್ರೀಲಂಕಾದ ಅಧ್ಯಕ್ಷ ದಿನೇಶ್ ಗುಣವರ್ಧನಾ ಜತೆ ವಿದೇಶಾಂಗ ಸಚಿವ ಜೈಶಂಕರ್‌
ಶ್ರೀಲಂಕಾದ ಅಧ್ಯಕ್ಷ ದಿನೇಶ್ ಗುಣವರ್ಧನಾ ಜತೆ ವಿದೇಶಾಂಗ ಸಚಿವ ಜೈಶಂಕರ್‌    

ಕೊಲೊಂಬೊ: ಬಿಕ್ಕಟ್ಟಿನ ಸಮಯದಲ್ಲಿ ಭಾರತವು ದ್ವೀಪ ರಾಷ್ಟ್ರವಾದ ಶ್ರೀಲಂಕಾದ ಅತಿದೊಡ್ಡ ಸ್ನೇಹಿತ ಎಂದು ಶ್ರೀಲಂಕಾದ ಅಧ್ಯಕ್ಷ ದಿನೇಶ್ ಗುಣವರ್ಧನಾ ಬುಧವಾರ ಹೇಳಿದ್ದಾರೆ.

ಕೊಲೊಂಬೊದಲ್ಲಿ ನಡೆದ ಟಾಟಾ ಟಿಸ್ಕಾನ್‌ ಡೀಲರ್‌ ಕನ್ವೆಂಷನ್‌ 2023ರಲ್ಲಿ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಭಾರತೀಯ ಕಂಪನಿಗಳಿಗೆ ಆಹ್ವಾನಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನೈಬರ್‌ಹುಡ್‌ ಫಸ್ಟ್ ಪಾಲಿಸಿ ಅಡಿಯಲ್ಲಿ ಭಾರತ ಸರ್ಕಾರ ಮತ್ತು ಭಾರತೀಯ ಸಂಸ್ಥೆಗಳೆರಡೂ ಭಾರತೀಯರಿಗೆ ಮತ್ತು ಅದರಾಚಿಗಿನ ಜನರಿಗೆ, ವಿಶೇಷವಾಗಿ ನೆರೆಹೊರೆಯವರಿಗೆ ಸಹಕಾರಿಯಾಗುವಂತೆ ಕೆಲಸ ಮಾಡುತ್ತವೆ. ವಸುದೈವ ಕುಟುಂಬಕಂ ತತ್ವದ ಅಡಿ ಸಮುದಾಯ ಆಧಾರಿತ ವ್ಯವಹಾರ ನಡೆಸುವುದರಿಂದ ಭಾರತಕ್ಕೆ ಇದು ಸಾಧ್ಯವಾಗಿದೆ’ ಎಂದು ಹೈ ಕಮಿಷನರ್‌ ಗೋಪಾಲ್‌ ಬಾಗ್ಲೆ ಬಣ್ಣಿಸಿದ್ದಾರೆ.

ADVERTISEMENT

ಭಾರತ ಮತ್ತು ಶ್ರೀಲಂಕಾವನ್ನು ‘ನಾಗರಿಕತೆಯ ಅವಳಿ’ (ಸಿವಿಲೈಸೇಷನಲ್‌ ಟ್ವಿನ್ಸ್‌) ಎಂದಿರುವ ಗೋಪಾಲ್‌ ಅವರು, ಎರಡೂ ಸರ್ಕಾರಗಳು ಜನರಿಂದ ಜನರಿಗೆ ಮತ್ತು ವ್ಯವಹಾರದಿಂದ ವ್ಯವಹಾರ ಎಂಬ ಸಂಬಂಧದಡಿ ಕಾರ್ಯನಿರ್ವಹಿಸುತ್ತವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.