ADVERTISEMENT

ಮಿಲಿಟರಿ ಆಧುನೀಕರಣಕ್ಕೆ ಭಾರತ ಯತ್ನ: ಅಮೆರಿಕ

ಪಿಟಿಐ
Published 16 ಏಪ್ರಿಲ್ 2024, 20:03 IST
Last Updated 16 ಏಪ್ರಿಲ್ 2024, 20:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತವು ತನ್ನ ಸೇನೆಯನ್ನು ಆಧುನೀಕರಿಸಲು ಮತ್ತು ರಷ್ಯಾದ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಮೆರಿಕದ ಹಿರಿಯ ಗುಪ್ತಚರ ಅಧಿಕಾರಿ ಕಾಂಗ್ರೆಸ್‌ಗೆ ತಿಳಿಸಿದ್ದಾರೆ.

ಇಂಡೊ–ಪೆಸಿಫಿಕ್‌ ಪ್ರದೇಶದಾದ್ಯಂತ ಚೀನಾದ ಚಟುವಟಿಕೆಯನ್ನು ಸಮರ್ಪಕವಾಗಿ ಎದುರಿಸಲು ಭಾರತ ಇಚ್ಛಾಶಕ್ತಿ ಪ್ರದರ್ಶಿಸಿದೆ. ಈ ನಿಟ್ಟಿನಲ್ಲಿ 2023ರಲ್ಲಿ ಭಾರತವು ತನ್ನನ್ನು ಜಾಗತಿಕ ನಾಯಕನನ್ನಾಗಿ ಪ್ರದರ್ಶಿಸಿದೆ ಎಂದು ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್‌ ಜೆಫ್ರಿ ಕ್ರೂಸ್‌ ಹೇಳಿದ್ದಾರೆ.

ಕಳೆದ ವರ್ಷ ಭಾರತವು ಜಿ–20 ಗುಂಪಿನ ಆರ್ಥಿಕ ಶೃಂಗವನ್ನು ಆಯೋಜಿಸುವ ಮೂಲಕ ಜಾತಿಕ ನಾಯಕನಾಗಿ ತನ್ನನ್ನು ಪ್ರದರ್ಶಿಸಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.