ADVERTISEMENT

ಭಾರತೀಯ ಅಮೆರಿಕನ್‌ ಫೈಜಾನ್‌ ‘ಸ್ಪೆಲ್ಲಿಂಗ್‌ ಬೀ’ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:12 IST
Last Updated 30 ಮೇ 2025, 16:12 IST
ಫೈಜಾನ್‌ ಝಾಕಿ
ಫೈಜಾನ್‌ ಝಾಕಿ   

ಆಕ್ಸನ್‌ ಹಿಲ್‌ (ಅಮೆರಿಕ) : 13 ವರ್ಷದ ಭಾರತೀಯ ಅಮೆರಿಕನ್‌ ಫೈಜಾನ್‌ ಝಾಕಿ ಅವರು ಅಮೆರಿಕದ ಪ್ರತಿಷ್ಠಿತ 2025ರ ‘ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಚಾಂಪಿಯನ್‌ಷಿಪ್‌’ ಪಟ್ಟ ಅಲಂಕರಿಸಿದ್ದಾರೆ.

ಫೈಜಾನ್‌ ಕಳೆದ ಬಾರಿ ‘ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಚಾಂಪಿಯನ್‌ಷಿಪ್‌’ನಲ್ಲಿ ರನ್ನರ್‌ ಆಪ್‌ ಆಗಿದ್ದರು. ಈತನ ತಂದೆ ದಕ್ಷಿಣ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

‘ಬಾಲ್ಯದಿಂದಲೇ ಕಾಗುಣಿತದ ಬಗ್ಗೆ ಆಸಕ್ತಿ ಹೊಂದಿದ್ದ, ಸತತ ಪರಿಶ್ರಮದಿಂದ ನಿಘಂಟಿನಲ್ಲಿನ ಬಹುತೇಕ ಪದಗಳ ಬಗ್ಗೆ ಆತನಿಗೆ ಜ್ಞಾನ ಇದೆ. ಈ ಹಂತಕ್ಕೆ ಬಂದಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ’ ಎಂದು ಫೈಜಾನ್‌ ತಂದೆ ಝಾಕಿ ಅನ್ವರ್‌ ತಿಳಿಸಿದರು.

ADVERTISEMENT

ಹಿಂದಿನ 36 ಚಾಂಪಿಯನ್‌ಗಳಲ್ಲಿ 30 ಚಾಂಪಿಯನ್‌ಗಳು ಭಾರತೀಯ ಅಮೆರಿಕನ್ನರು ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.