ADVERTISEMENT

ಜಗತ್ತಿನ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತ ಮೂಲದ ನತಾಶ ಹೆಸರು

ಪಿಟಿಐ
Published 7 ಫೆಬ್ರುವರಿ 2023, 11:21 IST
Last Updated 7 ಫೆಬ್ರುವರಿ 2023, 11:21 IST
ನತಾಶಾ ಪೆರಿಯನಯಗಂ
ನತಾಶಾ ಪೆರಿಯನಯಗಂ   

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಅಮೆರಿಕ ಬಾಲಕಿ ನತಾಶಾ ಪೆರಿಯನಯಗಂ ಅವರು ಜಾನ್‌ ಹಾಪ್‌ಕಿನ್ಸ್‌ ಸೆಂಟರ್‌ ಫಾರ್‌ ಟ್ಯಾಲೆಂಟೆಡ್‌ ಯೂತ್ ಪರೀಕ್ಷೆ (ಸಿಟಿಐ)ಯಲ್ಲಿ ತೇರ್ಗಡೆಯಾಗುವ ಮೂಲಕ ಸತತ ಎರಡನೇ ವರ್ಷವೂ ‘ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ 76 ದೇಶಗಳ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 13 ವರ್ಷದ ನತಾಶಾ ಈಗ ನ್ಯೂಜೆರ್ಸಿಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನತಾಶಾ ಪೋಷಕರು ಭಾರತದ ಚೆನ್ನೈ ಮೂಲದವರಾಗಿದ್ದು, ನತಾಶಾ 2021ರಲ್ಲಿ ಅಂದರೆ ಅವರು 5ನೇ ತರಗತಿಯಲ್ಲಿದ್ದಾಗ ಸಿಟಿಐ ಪರೀಕ್ಷೆ ಬರೆದಿದ್ದರು. ಮೌಖಿಕ ಮತ್ತು ಕ್ವಾಂಟಿಟೇಟಿವ್ ವಿಭಾಗಗಳಲ್ಲಿನ ಅವರ ಕಾರ್ಯಕ್ಷಮತೆಯು 8ನೇ ತರಗತಿಯ ವಿದ್ಯಾರ್ಥಿಯ ಕಾರ್ಯಕ್ಷಮತೆಯಷ್ಟಿತ್ತು ಎಂದು ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.