ADVERTISEMENT

ನ್ಯಾಯಾಧೀಶರಾಗಿ ಭಾರತೀಯ ಸಂಜಾತೆ ಶಿರೀನ್‌ ಮ್ಯಾಥ್ಯೂ ನೇಮಕ

ಪಿಟಿಐ
Published 1 ಸೆಪ್ಟೆಂಬರ್ 2019, 17:28 IST
Last Updated 1 ಸೆಪ್ಟೆಂಬರ್ 2019, 17:28 IST

ವಾಷಿಂಗ್ಟನ್‌ : ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತೀಯ ಸಂಜಾತೆ, ಅಮೆರಿಕ ಅಟಾರ್ನಿ ಶಿರೀನ್ ಮ್ಯಾಥ್ಯೂ ಅವರನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇಮಿಸಿದ್ದಾರೆ.

ಈ ಮೂಲಕ ಶಿರೀನ್ ಅವರು ‘ಆರ್ಟಿಕಲ್ 3 ಫೆಡರಲ್‌ ಜಡ್ಜ್‌’ ಆಗಿ ಕಾರ್ಯನಿರ್ವಹಿಸಲಿರುವ ಭಾರತೀಯ ಸಂಜಾತೆ ಹಾಗೂ ಏಷಿಯಾ ಪ್ಯಾಸಿಫಿಕ್‌ನ ಪ್ರಥಮ ಮಹಿಳೆಯಾಗಲಿದ್ದಾರೆ ಎಂದು ರಾಷ್ಟ್ರೀಯ ಏಷಿಯಾ ಪ್ಯಾಸಿಫಿಕ್‌ ಅಮೆರಿಕ ವಕೀಲರ ಸಂಘ ಹೇಳಿದೆ.

‘ಆರ್ಟಿಕಲ್‌ 3 ಫೆಡರಲ್‌ ನ್ಯಾಯಾಧೀಶ’ ಸ್ಥಾನವು ಉತ್ತಮ ಸನ್ನಡತೆಗೆ ದೊರೆಯಲಿದೆ. ಇದರರ್ಥ ಕೆಲ ಸಂದರ್ಭಗಳನ್ನು ಹೊರತುಪಡಿಸಿ ಅವರು ಜೀವಿತಾವಧಿಗೆ ನೇಮಕವಾಗುವರು. ಸರ್ಕಾರಿ ಸೇವೆಗೆ ಬರುವ ಮೊದಲು ಶಿರೀನ್‌ ಸ್ಯಾನ್‌ಡಿಗೊದಲ್ಲಿ ಲಾಥಂ ಮತ್ತು ವಾಕಿನ್ಸ್‌ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.