ADVERTISEMENT

ವಂಚನೆ ಆರೋಪ ಭಾರತೀಯ ಪ್ರಜೆ ಬಂಧನ

ಪಿಟಿಐ
Published 11 ಜೂನ್ 2022, 10:46 IST
Last Updated 11 ಜೂನ್ 2022, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌ (ಪಿಟಿಐ): ಹಿರಿಯ ನಾಗರಿಕರನ್ನು ಗುರಿಯಾಗಿಸಿ ನಡೆಸುತ್ತಿದ್ದ ವಂಚನೆ ಜಾಲಕ್ಕೆ ಆರೋಪದಡಿ ಭಾರತೀಯ ಪ್ರಜೆಯೊಬ್ಬನನ್ನು ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದಾರೆ.

ಸಂಚು ಮತ್ತು ಇ–ಮೇಲ್‌ ವಂಚನೆ ಕುರಿತ ಆರೋಪದಡಿ ಬಂಧಿತ ಅನಿರುದ್ಧ ಕಲ್ಕೊಟೆಯನ್ನು (24) ಹೂಸ್ಟನ್‌ನ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲಾಯಿತು. ಈ ಕೃತ್ಯದಲ್ಲಿ ಹೂಸ್ಟನ್ ನಿವಾಸಿ ಎಂ.ಡಿ.ಅಜದ್‌ (25) ಕೂಡಾ ಭಾಗಿ ಎಂದು ತಿಳಿಸಿದ್ದಾರೆ.

ಆರೋಪ ಸಾಬೀತಾದಲ್ಲಿ 20 ವರ್ಷದವರೆಗೆ ಸಜೆ, ₹ 1.95 ಕೋಟಿವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇಂತಹದೇ ಪ್ರಕರಣದಲ್ಲಿ ಮೂವರು ಭಾರತೀಯಪ್ರಜೆಗಳು ಅಪರಾಧಿ ಎಂದು ಸಾಬೀತಾಗಿದ್ದು, ಶಿಕ್ಷೆಯ ಸ್ವರೂಪ ಪ್ರಕಟವಾಗಬೇಕಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.