ADVERTISEMENT

ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಭಾರತೀಯ ಮೂಲದ ಲೇಖಕಿ ಅವ್ನಿ ದೋಶಿ ಕಾದಂಬರಿ

ಪಿಟಿಐ
Published 28 ಜುಲೈ 2020, 12:44 IST
Last Updated 28 ಜುಲೈ 2020, 12:44 IST
ಅವ್ನಿ ದೋಶಿ (ಚಿತ್ರ ಕೃಪೆ : ಅವ್ನಿ ದೋಶಿ ವೆಬ್‌ಸೈಟ್‌)
ಅವ್ನಿ ದೋಶಿ (ಚಿತ್ರ ಕೃಪೆ : ಅವ್ನಿ ದೋಶಿ ವೆಬ್‌ಸೈಟ್‌)   

ಲಂಡನ್: ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಬೂಕರ್‌ ಪ್ರಶಸ್ತಿ‘ಗೆ ಆಯ್ಕೆಯಾಗಬಹುದಾದ ಹದಿಮೂರು ಕೃತಿಗಳ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಅದರಲ್ಲಿ ದುಬೈನಲ್ಲಿರುವ ಭಾರತೀಯ ಮೂಲದ ಲೇಖಕಿ ಅವ್ನಿ ದೋಶಿಅವರ ಚೊಚ್ಚಲ ಕಾದಂಬರಿ ‘ಬರ್ನ್ಟ್‌ ಸುಗರ್’ಕಾದಂಬರಿಯೂ ಸ್ಥಾನ ಪಡೆದಿದೆ.

ಬ್ರಿಟನ್ ಅಥವಾ ಐರ್ಲೆಂಡ್‌ನಲ್ಲಿ 2019 ಅಕ್ಟೋಬರ್‌ನಿಂದ 2020 ಸೆಪ್ಟೆಂಬರ್ ಅವಧಿಯಲ್ಲಿ ಪ್ರಕಟಗೊಂಡ ಸುಮಾರು 162 ಕಾದಂಬರಿಗಳನ್ನು ಪರಿಶೀಲಿಸಿದ ತೀರ್ಪುಗಾರರು, 13 ಲೇಖಕರ ಕೃತಿಗಳನ್ನೊಳಗೊಂಡ ಪ್ರಾಥಮಿಕ ಹಂತದ ಆಯ್ಕೆ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ಅವ್ನಿ ದೋಶಿಯವರ ಕಾದಂಬರಿಯೂ ಸೇರಿದೆ. ಜತೆಗೆ, ಎರಡು ಬಾರಿ ‘ಬೂಕರ್ ಪ್ರಶಸ್ತಿ‘ ಪಡೆದಿರುವ ಹಿಲರಿ ಮಂಟೇಲ್ ಅವರ ‘ದಿ ಮಿರರ್ ಅಂಡ್ ದಿ ಲೈಟ್‌‘ ಕೃತಿಯೂ ಸೇರಿದೆ.

ಮಂಗಳವಾರ ಹದಿಮೂರು ಲೇಖಕರ ಪಟ್ಟಿಯನ್ನು ತೀರ್ಪುಗಾರರು ಬಿಡುಗಡೆ ಮಾಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಅಂತಿಮ ಸುತ್ತಿನ ಆಯ್ಕೆ ನಡೆಯಲಿದ್ದು, ನವೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ADVERTISEMENT

ಅವ್ನಿ ದೋಶಿ ಅಮೆರಿಕದಲ್ಲಿ ಹುಟ್ಟಿದ್ದು, ದುಬೈನಲ್ಲಿ ನೆಲಸಿದ್ದಾರೆ. ಇವರ ಚೊಚ್ಚಲ ಕಾದಂಬರಿ ‘ಬರ್ನ್ಟ್‌ ಸುಗರ್‘ ಈ ಮೊದಲು ಭಾರತೀಯ ಓದುಗರಿಗಾಗಿ ‘ಗರ್ಲ್ ಇನ ವೈಟ್ ಕಾಟನ್‌‘ ಹೆಸರಲ್ಲಿ ಪ್ರಕಟವಾಗಿತ್ತು. ಇದು 2019ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು. ಕಳೆದ ಗುರುವಾರ ‘ಬರ್ನ್ಟ್‌ ಸುಗರ್‘ ಹೆಸರಿನಲ್ಲಿ ಈ ಕೃತಿ ಬ್ರಿಟನ್‌ನಲ್ಲಿ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.