ಲಂಡನ್: ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ ಅವರಿಗೆ ಮರಣೋತ್ತರವಾಗಿ ‘ವಿ.ಕೆ. ಕೃಷ್ಣ ಮೆನನ್’ ಪ್ರಶಸ್ತಿ ನೀಡಲಾಗಿದೆ.
‘ಭಾರತೀಯ ರಾಯಭಾರಿ ಹಾಗೂ ರಾಜಕಾರಣಿ ವಿ.ಕೆ. ಕೃಷ್ಣ ಮೆನನ್ಅವರ 123ನೇ ಜನ್ಮವರ್ಷಾಚರಣೆ ವೇಳೆ ಗೋವೆಂದರ್‌ಗೆ ಪ್ರಶಸ್ತಿ ನೀಡಲು ನಿರ್ಣಯಿಸಲಾಗಿತ್ತು’ ಎಂದು ವಿ.ಕೆ. ಕೃಷ್ಣ ಮೆನನ್ ಸಂಸ್ಥೆಯ ಟೋನಿ ಸ್ಲೇಟರ್ ತಿಳಿಸಿ
ದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಶ್ವೇತವರ್ಣೀಯರಿಗಷ್ಟೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಇದನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ ಮೊದಲ ಪತ್ರಕರ್ತ ಇವರಾಗಿದ್ದರು. ‘ಮೆನನ್ ರೀತಿ ಗೋವೆಂದರ್ ಸಹ ನಿಸ್ವಾರ್ಥರಾಗಿದ್ದರು’ ಎಂದು ಸ್ಲೇಟರ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 1930ರಲ್ಲಿ ಜನಿಸಿದ್ದಇವರು, 2016ರಲ್ಲಿ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.