ADVERTISEMENT

ಹೂಡಿಕೆ ವಂಚನೆ: ಭಾರತೀಯ ಸಂಜಾತ ನವೋದ್ಯಮಿ ಬಂಧನ

ಪಿಟಿಐ
Published 1 ಜುಲೈ 2022, 13:29 IST
Last Updated 1 ಜುಲೈ 2022, 13:29 IST

ವಾಷಿಂಗ್ಟನ್‌: ಹೆಚ್ಚಿನ ಲಾಭದ ಆಮಿಷವೊಡ್ಡಿ ಹೂಡಿಕೆದಾರರನ್ನು ವಂಚಿಸಿದ್ದ ಭಾರತೀಯ ಸಂಜಾತ ನವೋದ್ಯಮಿಯೊಬ್ಬರನ್ನು ಲಾಸ್‌ ಏಂಜಲೀಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ನೀಲ್‌ ಚಂದ್ರನ್‌ (50) ಬಂಧಿತ ಆರೋಪಿ. ಲಾಸ್‌ ವೇಗಸ್‌ನಲ್ಲಿ ನೆಲೆಸಿದ್ದ ಇವರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕಂಪನಿಗಳನ್ನು ನಡೆಸುತ್ತಿದ್ದರು. ತನ್ನ ಕಂಪನಿಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಲಾಭ ನೀಡುವುದಾಗಿ ಗ್ರಾಹಕರನ್ನು ನಂಬಿಸುತ್ತಿದ್ದರು. ಈವರೆಗೆ ಒಟ್ಟು 10 ಸಾವಿರಕ್ಕೂ ಅಧಿಕ ಮಂದಿಯಿಂದ ಸುಮಾರು 45 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹355.63 ಕೋಟಿ) ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರನ್‌ ಮೇಲಿನ ಆರೋಪ ಸಾಬೀತಾದರೆ ಅವರು ಗರಿಷ್ಠ 20 ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.