ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ನ್ಯೂಯಾರ್ಕ್: ವಿಮಾನದಲ್ಲಿ ಸಹ ಪ್ರಯಾಣಿಕರೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಭಾರತ ಮೂಲದ 36 ವರ್ಷದ ವ್ಯಕ್ತಿಯ ಮೇಲೆ ಹೊರಿಸಲಾಗಿದೆ.
ಮೊಂಟಾನಾದಿಂದ ಟೆಕ್ಸಾಸ್‌ಗೆ ತೆರಳುವಾಗ ಭುವನೇಶ್ ಕುಮಾರ್ ದಯ್ಯಾಭಾಯ್ ಶುಕ್ಲಾ ಎಂಬಾತ ಕೃತ್ಯ ಎಸಗಿದ್ದ ಎಂದು ವಕೀಲ ಕರ್ಟ್ ಅಲ್ಮೆ ಹೇಳಿಕೆ ನೀಡಿದ್ದಾರೆ.
ನ್ಯೂಜೆರ್ಸಿ ನಿವಾಸಿ ಶುಕ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 2 ವರ್ಷ ಸಜೆ, 2.5 ಲಕ್ಷ ಡಾಲರ್ ದಂಡ ವಿಧಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಆರೋಪಿ 2025ರ ಏಪ್ರಿಲ್ 17ಕ್ಕೆ ವಿಚಾರಣೆಗೆ ಹಾಜರಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.