ADVERTISEMENT

ಕ್ಯಾಲಿಪೋರ್ನಿಯಾ ಗುರುದ್ವಾರಕ್ಕೆ ಬೆಂಕಿಹಚ್ಚಲು ಸಂಚು ಆರೋಪ: ಸಿಖ್‌ ವ್ಯಕ್ತಿ ಸೆರೆ

ಪಿಟಿಐ
Published 11 ಮಾರ್ಚ್ 2023, 11:41 IST
Last Updated 11 ಮಾರ್ಚ್ 2023, 11:41 IST
.
.   

ನ್ಯೂಯಾರ್ಕ್‌: ಕ್ಯಾಲಿಪೋರ್ನಿಯಾದಲ್ಲಿ ಇರುವ ಪ್ರಮುಖ ಗುರುದ್ವಾರಕ್ಕೆ ಬೆಂಕಿ ಹಚ್ಚಲು ಮತ್ತು ಜನರ ಮೇಲೆ ಗುಂಡಿನ ದಾಳಿ ನಡೆಸಲು ಜನರನ್ನು ನಿಯೋಜಿಸಲು ಸಂಚು ನಡೆಸಿದ್ದ ಆರೋಪದಡಿ 60 ವರ್ಷದ ವಯಸ್ಸಿನ ಸಿಖ್‌ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಂಧಿತನನ್ನು ರಾಜ್‌ವೀರ್ ರಾಜ್‌ ಸಿಂಗ್ ಗಿಲ್‌ ಎಂದು ಗುರುತಿಸಲಾಗಿದೆ. ಇವರು ಬೇಕರ್ಸ್‌ಫೀಲ್ಡ್ ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಿದ್ದರು. ಆತನನ್ನು ಮಾರ್ಚ್ 4ರಂದು ಬಂಧಿಸಲಾಗಿದೆ. ಕ್ರಿಮಿನಲ್ ಬೆದರಿಕೆ ಆರೋಪಕ್ಕೆ ಸಂಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT