ADVERTISEMENT

ಗೆಳತಿಯನ್ನು ಕೊಂದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 7:28 IST
Last Updated 14 ಅಕ್ಟೋಬರ್ 2020, 7:28 IST

ಜೆಫರ್ಸ್‌ನ್‌ವಿಲ್ಲೆ(ಅಮೆರಿಕ): ತನ್ನ ಮಾಜಿ ಗೆಳೆತಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ತಿನ್ನುತ್ತಿದ್ದ ದಕ್ಷಿಣ ಇಂಡಿಯಾನಾದ ವ್ಯಕ್ತಿಯೊಬ್ಬನಿಗೆ ಪೆರೋಲ್ ಇಲ್ಲದೆ ಮಂಗಳವಾರ ಜೀವಾವಧಿ ಶಿಕ್ಷೆಯನ್ನು ಅಲ್ಲಿನ ನ್ಯಾಯಾಲಯ ವಿಧಿಸಿದೆ.

ಜೋಸೆಫ್‌ ಒಬೆರ್‌ಹಾನ್ಸ್ಲೆ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಗೆಳತಿ ಟಮ್ಮಿ ಜೋ ಬ್ಲಾಂಟನ್‌ಳನ್ನು ಕ್ರೂರವಾಗಿ ಕೊಂದಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕ್ಲಾರ್ಕ್‌ ಸರ್ಕ್ಯೂಟ್‌ ನ್ಯಾಯಾಧೀಶರಾದ ವಿಕ್ಕಿ ಕಾರ್ಮೈಕಲ್ ಅವರು ಒಬೆರ್‌ಹಾನ್ಸ್ಲೆಗೆ ಶಿಕ್ಷೆ ವಿಧಿಸಿದರು.

46 ವರ್ಷದ ಬ್ಲಾಂಟನ್‌ ಅವರು 2014ರ ಸೆಪ್ಟೆಂಬರ್‌ 11 ರಂದು ಅವರ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ 25 ಗಾಯಗಳಾಗಿದ್ದವು. ಅವರನ್ನುಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.