ಇಸ್ರೇಲ್ ಸೇನೆಯ ಗುಂಡಿನ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೀನಿಯನ್ನರು ಗಾಜಾದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದು
ದಾರ್ ಅಲ್–ಬಲಾ: ‘ಗಾಜಾಪಟ್ಟಿಯ ಕೇಂದ್ರ ಭಾಗದಿಂದ ಹೊರ ನಡೆಯಿರಿ’ ಎಂದು ಇಸ್ರೇಲ್ ಸೇನೆಯು ಭಾನುವಾರ ಆದೇಶ ನೀಡಿದೆ. ನಿರಾಶ್ರಿತ ಜನರಿಗಾಗಿ ಆಹಾರ, ಔಷಧ ಸೇರಿದಂತೆ ಹಲವು ರೀತಿಯ ನೆರವು ನೀಡುತ್ತಿರುವ ಅಂತರರಾಷ್ಟ್ರೀಯ ಸಂಸ್ಥೆಗಳು ಈ ಭಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.
ಇಸ್ರೇಲ್ ತನ್ನ ಈವರೆಗಿನ ಕಾರ್ಯಾಚರಣೆಯಲ್ಲಿ ಗಾಜಾದ ಈ ಭಾಗದ ಮೇಲೆ ದಾಳಿ ನಡೆಸಿರಲಿಲ್ಲ. ಈ ಆದೇಶದಿಂದ ದಾರ್ ಅಲ್–ಬಲಾ ನಗರ ಹಾಗೂ ಗಾಜಾದ ದಕ್ಷಿಣ ಭಾಗದಲ್ಲಿರುವ ರಫಾ ಹಾಗೂ ಖಾನ್ ಯೂನುಸ್ ನಗರದ ಮಧ್ಯೆ ಇರುವ ಸಂಪರ್ಕ ಕಡಿತವಾಗಲಿದೆ.
ಇಸ್ರೇಲ್ ಹಾಗೂ ಹಮಾಸ್ ಬಂಡುಕೋರ ಸಂಘಟನೆಯ ಮಧ್ಯೆ ಕದನ ವಿರಾಮಕ್ಕೆ ಸಂಬಂಧಿಸಿ ಕತಾರ್‌ನಲ್ಲಿ ಮಾತುಕತೆ ನಡೆಯುತ್ತಿದೆ. ಆದರೆ, ಮಾತುಕತೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ‘ಮಾತುಕತೆಗೆ ಬರುವಂತೆ ಹಮಾಸ್ ಮೇಲೆ ಒತ್ತಡ ಹೇರಲು ಗಾಜಾ ಮೇಲೆ ದಾಳಿ ನಡೆಸಲೇಬೇಕು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪದೇ ಪದೇ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.