ಬೆಂಗಳೂರು: ಈಚೆಗೆ ತೀವ್ರ ಭೂಕಂಪಕ್ಕೆ ಗುರಿಯಾದ ಮ್ಯಾನ್ಮಾರ್‌ನ ಮ್ಯಾಂಡಲೇ ಮತ್ತು ಸಗಾಇಂಗ್ ನಗರಗಳ ಉಪಗ್ರಹ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಂಗಳವಾರ ಬಿಡುಗಡೆ ಮಾಡಿದೆ.
ಇಸ್ರೊವಿನ ‘ಕಾರ್ಟೊಸ್ಯಾಟ್–3’ ಉಪಗ್ರಹವು ಈ ನಗರಗಳ ಚಿತ್ರಗಳನ್ನು ಸೆರೆಹಿಡಿದಿದೆ. ಭೂಕಂಪಕ್ಕೂ ಮುನ್ನ (ಮಾರ್ಚ್ 18) ಮತ್ತು ಭೂಕಂಪದ ನಂತರ (ಮಾರ್ಚ್ 29ರಂದು) ತೆಗೆಯಲಾದ ಹಲವು ಚಿತ್ರಗಳನ್ನು ಇಸ್ರೊ ಬಿಡುಗಡೆ ಮಾಡಿದೆ.
ಮ್ಯಾಂಡಲೇ ನಗರದ ಸ್ಕೈ ವಿಲ್ಲಾ, ಫಯಾನಿ ಪಗೋಡಾ, ಮಹಾಮುನಿ ಪಗೋಡಾ, ಆನಂದ ಪಗೋಡಾ, ಮ್ಯಾಂಡಲೇ ವಿಶ್ವವಿದ್ಯಾಲಯ, ಸಗಾಇಂಗ್ ವಿವಿಧ ಕಟ್ಟಡಗಳ ಚಿತ್ರಗಳು ಇದರಲ್ಲಿ ಸೇರಿವೆ. ಈ ಚಿತ್ರಗಳು ಇಸ್ರೊ ಜಾಲತಾಣದಲ್ಲಿ ಲಭ್ಯವಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.