
ಸಾಂದರ್ಭಿಕ ಚಿತ್ರ
ಜೆರುಸೆಲೇಂ: ಜೆರುಸೆಲೇಂನ ಪೂರ್ವ ಭಾಗದಲ್ಲಿರುವ ‘ವಿಶ್ವ ಸಂಸ್ಥೆ ಪರಿಹಾರ ಮತ್ತು ಕಾರ್ಯ ಏಜೆನ್ಸಿ’ (ಯುಎನ್‌ಆರ್‌ಡಬ್ಲ್ಯುಎ) ಕೇಂದ್ರ ಕಚೇರಿಯನ್ನು ಇಸ್ರೇಲ್ ಮಂಗಳವಾರ ನೆಲಸಮಗೊಳಿಸಿದೆ.
ಪ್ಯಾಲೆಸ್ಟೀನ್ ಪರ ಮಾನವೀಯ ನೆರವು ನೀಡುವುದನ್ನು ತಡೆಯುವ ಸಂಬಂಧ ತಾನು ರೂಪಿಸಿಕೊಂಡಿರುವ ಕಾನೂನಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇದೊಂದು ‘ಐತಿಹಾಸಿಕ ದಿನ’ ಎಂದೂ ಅದು ಕರೆದುಕೊಂಡಿದೆ.
ಈ ಬಗ್ಗೆ ಯುಎನ್‌ಆರ್‌ಡಬ್ಲ್ಯುಎ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಇಸ್ರೇಲ್ ಸೇನೆಯು ನಮ್ಮ ಸಿಬ್ಬಂದಿಯಿಂದ ಕಂಪ್ಯೂಟರ್ ಸೇರಿದಂತೆ ಅವರ ಇತರೆ ಸಾಧನಗಳನ್ನು ಕಸಿದುಕೊಂಡಿದೆ. ಜೊತೆಗೆ, ಕಚೇರಿಯಿಂದ ಬಲವಂತವಾಗಿ ಸಿಬ್ಬಂದಿಯನ್ನು ಹೊರದಬ್ಬಲಾಗಿದೆ’ ಎಂದು ಆರೋಪಿಸಿದೆ.
‘ಇದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ವಿಶ್ವ ಸಂಸ್ಥೆ ಹೊಂದಿರುವ ಸವಲತ್ತು ಮತ್ತು ಅಧಿಕಾರವನ್ನೂ ಇಸ್ರೇಲ್ ಉಲ್ಲಂಘಿಸಿದೆ’ ಎಂದು ಸಂಸ್ಥೆ ದೂರಿದೆ. ‘ಯುಎನ್‌ಆರ್‌ಡಬ್ಲ್ಯುಎ ಸಂಸ್ಥೆಗೆ ಹಮಾಸ್ ಬಂಡುಕೋರರೊಂದಿಗೆ ಸಂಪರ್ಕವಿದೆ’ ಎನ್ನುವುದು ಇಸ್ರೇಲ್‌ನ ಎಂದಿನ ಆರೋಪ. ಆದರೆ, ಸಂಸ್ಥೆ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.