ADVERTISEMENT

ಪಾಕ್‌ನ ಐಎಸ್‌ಐ ಮುಖ್ಯಸ್ಥರಾಗಿ ಅಸೀಮ್ ಮುನಿರ್ ನೇಮಕ

ಪಿಟಿಐ
Published 10 ಅಕ್ಟೋಬರ್ 2018, 18:56 IST
Last Updated 10 ಅಕ್ಟೋಬರ್ 2018, 18:56 IST

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಬಲ ಗೂಢಾಚಾರ ಸಂಸ್ಥೆ ಇಂಟರ್ ಸರ್ವಿಸ್ ಇಂಟಲಿಜೆನ್ಸ್‌(ಐಎಸ್‌ಐ) ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅಸೀಮ್ ಮುನಿರ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ ಎಂದು ಪಾಕ್ ಸೇನೆಯ ಮಾಧ್ಯಮ ವಿಭಾಗ ಹೇಳಿದೆ.

2016ರ ಡಿಸೆಂಬರ್‌ನಲ್ಲಿ ಐಎಸ್‌ಐನ ಮುಖ್ಯಸ್ಥಾಗಿ ನೇಮಕವಾಗಿದ್ದ ಲೆಫ್ಟಿನೆಂಟ್ ಜನರಲ್ ನವೀದ್ ಮುಖ್ತಾರ್ ಅವರಿಂದ ತೆರವಾದ ಸ್ಥಾನಕ್ಕೆ ಮುನಿರ್ ನೇಮಕವಾಗಿದ್ದಾರೆ.

ಮುನಿರ್‌ ಅವರು ಈ ಹಿಂದೆ ಮಿಲಿಟರಿ ಗುಪ್ತದಳದ (ಎಂಐ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಉತ್ತರ ಭಾಗಗಳ ಸೇನಾಪಡೆಯ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು.

ADVERTISEMENT

ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಭಾಜ್ವಾ ನೇತೃತ್ವದ ಸೇನಾ ಬಡ್ತಿ ಮಂಡಳಿ ಮುನಿರ್ ಅವರಿಗೆ ಇತ್ತೀಚೆಗಷ್ಟೆ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಬಡ್ತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.