ADVERTISEMENT

ಮಾಲ್ಡೀವ್ಸ್‌ಗೆ ಬೇಡವಾದ ಭಾರತದ ನೆರವು

ರಾಯಿಟರ್ಸ್
Published 10 ಆಗಸ್ಟ್ 2018, 19:48 IST
Last Updated 10 ಆಗಸ್ಟ್ 2018, 19:48 IST

ನವದೆಹಲಿ: ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ ಮತ್ತು ಸೈನಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಅಲ್ಲಿನ ಸರ್ಕಾರ ಭಾರತಕ್ಕೆ ಹೇಳಿದೆ.

ಮಾಲ್ಡೀವ್ಸ್‌ನಲ್ಲಿ ಭಾರತೀಯ ನೌಕಾಪಡೆಯ ಧ್ರುವ ಹೆಲಿಕಾಪ್ಟರ್‌ಗಳನ್ನು ಆರೋಗ್ಯ ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲದೆ ಪೈಲಟ್‌ಗಳೂ ಸೇರಿ 50 ಸೈನಿಕರನ್ನು ಭಾರತ ಅಲ್ಲಿ ನಿಯೋಜಿಸಿತ್ತು. ಈ ನೆರವಿಗೆ ಸಂಬಂಧಿಸಿದ ಒಪ್ಪಂದದ ಅವಧಿ ಜೂನ್‌ಗೆ ಮುಗಿದಿದೆ. ಹೀಗಾಗಿ ನೆರವನ್ನು ವಾಪಸ್ ಪಡೆದುಕೊಳ್ಳುವಂತೆ ಹೇಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

ಆದರೆ, ಮಾಲ್ಡೀವ್ಸ್‌ನಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಈಗ ಅಲ್ಲಿ ಇರುವ ಸರ್ಕಾರಕ್ಕೆ ಚೀನಾದ ಬೆಂಬಲವಿದೆ. ಹಾಗಾಗಿ ಭಾರತದ ನೆರವನ್ನುಮಾಲ್ಡೀವ್ಸ್ ವಾಪಸ್ ಮಾಡುತ್ತಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.