ADVERTISEMENT

ಪಾಕಿಸ್ತಾನ: ಕಾನ್‌ಸ್ಟೆಬಲ್‌ ಮೂಗು, ಕಿವಿ, ತುಟಿ ಕತ್ತರಿಸಿದ ವ್ಯಕ್ತಿ!

ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬೆದರಿಕೆ ಒಡ್ಡುತ್ತಿದ್ದ ಆರೋಪ

ಪಿಟಿಐ
Published 1 ಆಗಸ್ಟ್ 2022, 15:35 IST
Last Updated 1 ಆಗಸ್ಟ್ 2022, 15:35 IST
   

ಲಾಹೋರ್‌: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದಾರೆಂದು ಶಂಕಿಸಿ ವ್ಯಕ್ತಿಯೊಬ್ಬರು ಪೊಲೀಸ್‌ ಕಾನ್‌ಸ್ಟೆಬಲ್ ಮೂಗು, ಕಿವಿ ಮತ್ತು ತುಟಿಯನ್ನು ಕತ್ತರಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರುಸೋಮವಾರ ತಿಳಿಸಿದ್ದಾರೆ.

ಇಲ್ಲಿನ ಝಾಂಗ್‌ ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದೆ. ಮುಖ್ಯ ಆರೋಪಿ ಮಹಮ್ಮದ್‌ ಇಫ್ತಿಖರ್‌ ಸಹಚರರೊಂದಿಗೆ ಸೇರಿಕಾನ್‌ಸ್ಟೆಬಲ್‌ ಕಾಸಿಮ್‌ ಹಯಾತ್‌ ಎಂಬವರಿಗೆ ತೀವ್ರ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

‘ಕಾನ್‌ಸ್ಟೆಬಲ್‌ ಹಯಾತ್‌ಗೆ ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನದಿಂದ ಇಫ್ತಿಖರ್‌ ಮತ್ತು 12 ಮಂದಿ ಸಹಚರರು ಹಯಾತ್‌ ಅವರನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಕೊಯ್ದು ತೀವ್ರ ಕಿರುಕುಳ ನೀಡಿದ್ದಾರೆ.ತೀವ್ರ ಗಾಯಗೊಂಡ ಹಯಾತ್‌ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಮಗನನ್ನು ಕೊಲ್ಲುವ ಬೆದರಿಕೆಯೊಡ್ಡಿ ತಮ್ಮ ಪತ್ನಿಯೊಂದಿಗೆಹಯಾತ್‌ ಲೈಂಗಿಕ ಸಂಪರ್ಕ ನಡೆಸಿದ್ದರು. ಬಳಿಕ ಅದನ್ನು ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಫ್ತಿಖರ್‌ ಕಳೆದ ತಿಂಗಳು ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.