ಸೇಂಟ್ ಲೂಯಿಸ್: ಅಮೆರಿಕದ ಮಧ್ಯಭಾಗದಲ್ಲಿ ಬೀಸಿದ ಸುಂಟರಗಾಳಿಯ ಹೊಡೆತಕ್ಕೆ ಶನಿವಾರ 27 ಮಂದಿ ಮೃತಪಟ್ಟಿದ್ದಾರೆ.
ಕೆಂಟುಕಿಯಲ್ಲಿ 18 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸುಂಟರಗಾಳಿಯು ಇಂಡಿಯಾನ ಮತ್ತು ಕೆಂಟುಕಿಯಲ್ಲಿ ಹೆಚ್ಚಾಗಿ ಬೀಸಿದೆ.
ಲಾರೆಲ್ ಕೌಂಟಿ, ಕೆಂಟುಕಿಯಲ್ಲಿ ತೀವ್ರ ಹಾನಿ ಸಂಭವಿಸಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಪುಲಸ್ಕಿ ಕೌಂಟಿಯಲ್ಲಿ ಒಬ್ಬರು ಮೃತಪಟ್ಟಿದ್ದು, 10 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಲಂಡನ್–ಕಾರ್ಬಿನ್ ವಿಮಾನ ನಿಲ್ದಾಣ ಮತ್ತು ವಿಮಾನ ಸಂಗ್ರಹಗಾರಕ್ಕೆ ಹಾನಿಯಾಗಿದ್ದು, ವಿಮಾನವೊಂದು ಪಲ್ಟಿಯಾಗಿದೆ. ಕೆಲಸಗಾರರಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ಮಾಥ್ಯೂ ಸಿಂಗರ್ ಅವರು ತಿಳಿಸಿದ್ದಾರೆ.
ಸೇಂಟ್ ಲೂಯಿಸ್‌ನಲ್ಲಿ ಐವರು ಸೇರಿದಂತೆ ಮಿಸ್ಸೋರಿಯಲ್ಲಿ 7 ಮಂದಿ ಮತ್ತು ಸ್ಕಾಟ್ ಕೌಂಟಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಕೌಂಟಿಯ ಶೆರಿಫ್ ಕಚೇರಿ ತಿಳಿಸಿದೆ. ಆರಂಭಿಕ ಅಂದಾಜಿನ ಪ್ರಕಾರ ಸುಮಾರು 5 ಸಾವಿರ ಕಟ್ಟಡಗಳಿಗೆ ಹಾನಿಯಾಗಿದೆ.
ಸೇಂಟ್ ಲೂಯಿಸ್‌ನ ಸೆಂಟೆನಿಯಲ್ ಕ್ರಿಶ್ಚಿಯನ್ ಚರ್ಚ್‌ನ ಗೋಪುರ ಕುಸಿದು ಬಿದ್ದಿದ್ದು, ಅದರ ಅವಶೇಷಗಳಡಿ ಮೂವರು ಸಿಲುಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.