ADVERTISEMENT

ಮುಂಬೈ ದಾಳಿ: ಪಾಕ್‌ ಕಾನ್ಸುಲೇಟ್‌ ಕಚೇರಿ ಹೊರಗೆ ಭಾರತೀಯ ಮೂಲದವರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 15:31 IST
Last Updated 27 ನವೆಂಬರ್ 2022, 15:31 IST

ನ್ಯೂಯಾರ್ಕ್:ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದು 14 ವರ್ಷಗಳು ಸಂದಿರುವ ಸಂದರ್ಭದಲ್ಲಿ ಭಾರತೀಯ ವಲಸಿಗರು, ಇಲ್ಲಿರುವ ಪಾಕಿಸ್ತಾನ ಕಾನ್ಸುಲೇಟ್‌ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದರು. ಈ ದಾಳಿಯ ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಾ, ಜನರು ‘ಮುಂಬೈ 26/11’ ಅನ್ನು ಕ್ಷಮಿಸುವುದಿಲ್ಲ. ನಾವು ಮರೆಯುವುದಿಲ್ಲ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.‌

26/11ರ ಸಂಚುಕೋರ ಹಫೀಜ್ ಸಯೀದ್ ಮತ್ತು ಭಯೋತ್ಪಾದಕ ಅಜ್ಮಲ್ ಕಸಬ್ ಚಿತ್ರಗಳು ಹಾಗೂ ಭಯೋತ್ಪಾದಕರು ಕಟ್ಟಡದ ಮೇಲೆ ದಾಳಿ ಮಾಡಿದಾಗ ಉರಿಯುತ್ತಿರುವ ತಾಜ್ ಹೋಟೆಲ್‌ನ ಚಿತ್ರಗಳನ್ನು ತೋರಿಸುವ ‘ಡಿಜಿಟಲ್ ವ್ಯಾನ್’ ಅನ್ನು ಕಾನ್ಸುಲೇಟ್ ಕಚೇರಿಯ ಹೊರಗೆ ನಿಲ್ಲಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.