ADVERTISEMENT

15 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಲು ಕ್ರಮ

ಪಿಟಿಐ
Published 1 ಏಪ್ರಿಲ್ 2023, 11:31 IST
Last Updated 1 ಏಪ್ರಿಲ್ 2023, 11:31 IST
   

ನ್ಯೂಯಾರ್ಕ್‌ (ಪಿಟಿಐ): ಅಕ್ರಮವಾಗಿ ಸಾಗಣೆ ಮಾಡಿ ಮಾರಲಾಗಿದೆ ಎಂದು ಗುರುತಿಸಲಾದ 15 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಲು ಇಲ್ಲಿನ ಪ್ರತಿಷ್ಠಿತ ಮೆಟ್ರೊಪಾಲಿಟನ್ ಕಲಾ ಸಂಗ್ರಹಾಲಯವು ನಿರ್ಧರಿಸಿದೆ.

ಈ ಕುರಿತ ಹೇಳಿಕೆಯಲ್ಲಿ, ಭಾರತ ಸರ್ಕಾರಕ್ಕೆ ಈ ಕಲಾಕೃತಿಗಳನ್ನು ಹಸ್ತಾಂತರಿಸಲಾಗುವುದು. ಈ ಕಲಾಕೃತಿಗಳು 1, 11ನೇ ಶತಮಾನದ ಅವಧಿಯವು. ಟೆರ್ರಾಕೊಟಾ, ತಾಮ್ರ ಮತ್ತು ಶಿಲೆಯಲ್ಲಿ ರಚಿಸಲಾದವು ಎಂದು ತಿಳಿಸಿದೆ.

ಸದ್ಯ ಜೈಲಿನಲ್ಲಿರುವ ಸುಭಾಷ್ ಕಪೂರ್ ಎಂಬಾತ ಈ ಕಲಾಕೃತಿಗಳನ್ನು ಮಾರಾಟ ಮಾಡಿದ್ದ. ಪ್ರಾಚೀನ ಕಲಾಕೃತಿಗಳನ್ನು ಜವಾಬ್ದಾರಿಯಿಂದ ಸ್ವಾಧೀನಕ್ಕೆ ಪಡೆಯಲು ಸಂಗ್ರಹಾಲಯ ಸಿದ್ಧವಾಗಿದೆ. ಶಂಕಿತ ವಿತರಕರಿಂದ ಪಡೆದ ಕಲಾಕೃತಿಗಳ ಇತಿಹಾಸವನ್ನು ಕುರಿತು ಸಂಗ್ರಹಾಲಯ ಅಧ್ಯಯನ ನಡೆಸಲಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಕಪೂರ್‌ನ ಶಂಕಾಸ್ಪದ ಕೆಲಸ ಕುರಿತು ಸಂಗ್ರಹಾಲಯವು ಒಳಾಡಳಿತ ಭದ್ರತೆ ವಿಭಾಗದ ಗಮನಸೆಳೆದಿತ್ತು. ತನಿಖೆಯ ಫಲವಾಗಿ ಈಗ ಕಲಾಕೃತಿಗಳನ್ನು ಮರಳಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.