ನ್ಯೂಯಾರ್ಕ್: ಪ್ರೊ.ಅನಂತ ಚಂದ್ರಕಾಸನ್ ಅವರನ್ನು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ನೂತನ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಈ ಹುದ್ದೆಗೇರಿರುವ ಮೊದಲ ಭಾರತೀಯ ಅಮೆರಿಕನ್ ಎಂಬ ಗೌರವಕ್ಕೆ ಪ್ರೊ.ಅನಂತ ಪಾತ್ರರಾಗಿದ್ದಾರೆ.
ಚೆನ್ನೈನಲ್ಲಿ ಹುಟ್ಟಿದ ಚಂದ್ರಕಾಸನ್ ಅವರು ಎಂಐಟಿಯಲ್ಲಿ ಚೀಫ್ ಇನೊವೇಶನ್ ಮತ್ತು ಸ್ಟ್ರಾಟೆಜಿ ಆಫೀಸರ್ ಆಗಿದ್ದರು. ಇವರು ಜುಲೈ 1ರಿಂದ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
‘ನನಗೆ ಸಿಕ್ಕ ದೊಡ್ಡ ಗೌರವ ಇದು. ಬೋಧಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ದೇಶ ಮತ್ತು ಜಗತ್ತಿಗೆ ಮತ್ತಷ್ಟು ಅದ್ಭುತ ಕೊಡುಗೆಗಳನ್ನು ನೀಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.