ADVERTISEMENT

ಇರಾನ್‌ನ ಸಿಸಖ್ತ್ ನಗರದಲ್ಲಿ 5.6 ತೀವ್ರತೆಯ ಭೂಕಂಪ

ಏಜೆನ್ಸೀಸ್
Published 18 ಫೆಬ್ರುವರಿ 2021, 10:37 IST
Last Updated 18 ಫೆಬ್ರುವರಿ 2021, 10:37 IST
ಮಧ್ಯ ಇರಾನ್‌ನ ಸಿಸಖ್ತ್ ನಗರದಲ್ಲಿ ಸಂಭವಿಸಿದ ಭೂಕಂಪದಿಂದ ಹಾನಿಯಾಗಿರುವ ಕಟ್ಟಡದ ದೃಶ್ಯ (ಎಎಫ್‌ಪಿ ಚಿತ್ರ)
ಮಧ್ಯ ಇರಾನ್‌ನ ಸಿಸಖ್ತ್ ನಗರದಲ್ಲಿ ಸಂಭವಿಸಿದ ಭೂಕಂಪದಿಂದ ಹಾನಿಯಾಗಿರುವ ಕಟ್ಟಡದ ದೃಶ್ಯ (ಎಎಫ್‌ಪಿ ಚಿತ್ರ)    

ಟೆಹ್ರಾನ್: ಮಧ್ಯ ಇರಾನ್‌ನ ಸಿಸಖ್ತ್ ನಗರದಲ್ಲಿ ಬುಧವಾರ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

ರಾಜಧಾನಿ ಟೆಹ್ರಾನ್‌ನಿಂದ ದಕ್ಷಿಣ ಭಾಗದಲ್ಲಿ 500 ಕಿ.ಮೀ ದೂರದಲ್ಲಿರುವ ಸಿಸಖ್ತ್‌ ಪಟ್ಟಣ, ಭೂಕಂಪದಿಂದ ನಲುಗಿ ಹೋಗಿದೆ ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.

ಸಿಸಖ್ತ್ ಪಟ್ಟಣದ ಕೃಷಿ ಪ್ರದೇಶವಾಗಿದ್ದು, ಸುಮಾರು 6ಸಾವಿರ ಜನಸಂಖ್ಯೆ ಹೊಂದಿದೆ. ಇದು ಕೊಹ್ಕಿಲುಯೆಹ್ ಮತ್ತು ಬೊಯೆರ್–ಅಹ್ಮದ್‌ ಪ್ರಾಂತ್ಯದ ಭಾಗವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.