ADVERTISEMENT

ಪಾಕಿಸ್ತಾನದಲ್ಲಿ ಭಾರಿ ಮುಂಗಾರು ಮಳೆ: 9 ಮಂದಿ ಸಾವು

ಏಜೆನ್ಸೀಸ್
Published 5 ಜುಲೈ 2022, 12:18 IST
Last Updated 5 ಜುಲೈ 2022, 12:18 IST
ಪಾಕಿಸ್ತಾನದ ಕ್ವೆಟ್ವಾ ಹೊರವಲಯದ ಮನೆಯೊಂದು ಮಂಗಳವಾರ ಭಾರಿ ಮಳೆಗೆ ಕುಸಿದು ಬಿದ್ದಿದ್ದು, ಬಾಲಕನೊಬ್ಬ ಅಳಿದುಳಿದ ವಸ್ತುಗಳನ್ನು ಆಯ್ದುಕೊಳ್ಳುವುದರಲ್ಲಿ ಮಗ್ನನಾಗಿದ್ದ –ಎಪಿ/ಪಿಟಿಐ ಚಿತ್ರ
ಪಾಕಿಸ್ತಾನದ ಕ್ವೆಟ್ವಾ ಹೊರವಲಯದ ಮನೆಯೊಂದು ಮಂಗಳವಾರ ಭಾರಿ ಮಳೆಗೆ ಕುಸಿದು ಬಿದ್ದಿದ್ದು, ಬಾಲಕನೊಬ್ಬ ಅಳಿದುಳಿದ ವಸ್ತುಗಳನ್ನು ಆಯ್ದುಕೊಳ್ಳುವುದರಲ್ಲಿ ಮಗ್ನನಾಗಿದ್ದ –ಎಪಿ/ಪಿಟಿಐ ಚಿತ್ರ   

ಕ್ವೆಟ್ಟಾ: ಪಾಕಿಸ್ತಾನದ ನೈಋತ್ಯ ಪ್ರದೇಶ ಮತ್ತು ಇತರ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮುಂಗಾರು ಮಳೆಗೆ ಮನೆಗಳ ಚಾವಣಿಗಳು ಕುಸಿದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪ್ರಾಂತೀಯ ವಿಪತ್ತು ನಿರ್ವಹಣಾ ಸಂಸ್ಥೆ ಮಂಗಳವಾರ ತಿಳಿಸಿದೆ.

‘ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶಗಳಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು’ ಎಂದೂ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಜೂನ್‌ನಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.