ADVERTISEMENT

ಬರ್ಮಿಂಗ್‌ಹ್ಯಾಮ್‌ನಲ್ಲಿ ಹಲವರಿಗೆ ಚೂರಿ ಇರಿತ–ಕೆಲವರ ಸ್ಥಿತಿ ಗಂಭೀರ

ಏಜೆನ್ಸೀಸ್
Published 6 ಸೆಪ್ಟೆಂಬರ್ 2020, 9:40 IST
Last Updated 6 ಸೆಪ್ಟೆಂಬರ್ 2020, 9:40 IST
ಬರ್ಮಿಂಗ್‌ಹ್ಯಾಮ್‌ನ ಹಲವೆಡೆ  ಇರಿತ
ಬರ್ಮಿಂಗ್‌ಹ್ಯಾಮ್‌ನ ಹಲವೆಡೆ  ಇರಿತ   

ಲಂಡನ್‌: ಬರ್ಮಿಂಗ್‌ಹ್ಯಾಮ್‌ನ ಹಲವೆಡೆ ಜನರು ಶನಿವಾರ ಮಧ್ಯರಾತ್ರಿ ಇರಿತಕ್ಕೆ ಒಳಗಾಗಿದ್ದು,ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ಪ್ರಕರಣವನ್ನು ಪ್ರಮುಖ ಘಟನೆ ಎಂದು ಭಾನುವಾರ ಘೋಷಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಸರಣಿ ಇರಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಎಷ್ಟು ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದೆಲ್ಲಾ ಹೀಗೆ ನಡೆದಿದೆ ಎಂಬುದನ್ನು ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕೆಲ ಸಮಯದ ತನಕ ಜನರು ಘಟನಾ ಸ್ಥಳದಿಂದ ದೂರವಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.