ADVERTISEMENT

ಮ್ಯಾನ್ಮಾರ್‌: ಇಬ್ಬರು ಪತ್ರಕರ್ತರ ಬಿಡುಗಡೆ

16 ತಿಂಗಳ ಜೈಲುಶಿಕ್ಷೆಯಿಂದ ಮುಕ್ತ

ಏಜೆನ್ಸೀಸ್
Published 7 ಮೇ 2019, 19:50 IST
Last Updated 7 ಮೇ 2019, 19:50 IST
ಬಿಡುಗಡೆ ಬಳಿಕ ವಾ ಲೋನ್‌ (ಬಲದಿಂದ ಮೂರನೆಯವರು) ಹಾಗೂ ಕ್ಯಾ ಸೋ ಓ (ಎಡಗಡೆ) ಕುಟುಂಬ ಸದಸ್ಯರೊಂದಿಗೆ – ಎಎಫ್‌ಪಿ ಚಿತ್ರ
ಬಿಡುಗಡೆ ಬಳಿಕ ವಾ ಲೋನ್‌ (ಬಲದಿಂದ ಮೂರನೆಯವರು) ಹಾಗೂ ಕ್ಯಾ ಸೋ ಓ (ಎಡಗಡೆ) ಕುಟುಂಬ ಸದಸ್ಯರೊಂದಿಗೆ – ಎಎಫ್‌ಪಿ ಚಿತ್ರ   

ಯಾಂಗೂನ್:ಮ್ಯಾನ್ಮಾರ್‌ನಲ್ಲಿರೋಹಿಂಗ್ಯಾ ಮುಸ್ಲಿಮರ ಬಿಕ್ಕಟ್ಟಿನ ಕುರಿತು ವರದಿ ಮಾಡಿದ್ದಕ್ಕಾಗಿ 16 ತಿಂಗಳಿನಿಂದ ಜೈಲಿನಲ್ಲಿದ್ದ ಇಬ್ಬರು ಪತ್ರಕರ್ತರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಆಡಳಿತ ಗೋಪ್ಯತೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆರಾಯಿಟರ್ಸ್ ಪತ್ರಕರ್ತರಾದವಾ ಲೋನ್ ಹಾಗೂ ಕ್ಯಾ ಸೋ ಓ ಅವರನ್ನು 2017ರ ಡಿಸೆಂಬರ್‌ನಲ್ಲಿ ಬಂಧಿಸಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಜೈಲಿನಿಂದ ಹೊರಬಂದ ಇಬ್ಬರೂ ನೆರೆದಿದ್ದ ಜನರತ್ತ ನಗುತ್ತಾ ಕೈಬೀಸಿದರು. ಇವರ ಬಂಧನಕ್ಕೆಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು ಹಾಗೂ ಬಿಡುಗಡೆಗಾಗಿ ಆಂದೋಲನ ನಡೆಸಲಾಗಿತ್ತು. ‘ಬಂಧಿತ ಪತ್ರಕರ್ತರ ಕುಟುಂಬದವರು ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮಯಂಟ್ ಅವರಿಗೆ ಪತ್ರ ಬರೆದಿದ್ದರು. ದೇಶದ ದೀರ್ಘಾವಧಿಯ ಹಿತಾಸಕ್ತಿ ಪರಿಗಣಿಸಿ ನಾಯಕರು ಇಬ್ಬರನ್ನೂ ಈ ನಿರ್ಧಾರ ಕೈಗೊಂಡರು’ ಎಂದುಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.