ADVERTISEMENT

ಅಮೆರಿಕ ಸಂಸತ್ ಸ್ಪೀಕರ್ ಆಗಿ ನ್ಯಾನ್ಸಿ ಪೆಲೊಸಿ ಆಯ್ಕೆ

ಪಿಟಿಐ
Published 4 ಜನವರಿ 2021, 7:05 IST
Last Updated 4 ಜನವರಿ 2021, 7:05 IST
ನ್ಯಾನ್ಸಿ ಪೆಲೊಸಿಚಿತ್ರ: ಟ್ವಿಟರ್ ಖಾತೆಯಿಂದ
ನ್ಯಾನ್ಸಿ ಪೆಲೊಸಿಚಿತ್ರ: ಟ್ವಿಟರ್ ಖಾತೆಯಿಂದ   

ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಹಿರಿಯ ಸಂಸದೆ ನ್ಯಾನ್ಸಿ ಪೆಲೊಸಿ ಅವರು ನಾಲ್ಕನೇ ಬಾರಿಗೆ ಅಮೆರಿಕದ ಸಂಸತ್‌ ಸಭೆಯ ಸ್ಪೀಕರ್ ಆಗಿ ಪುನರಾಯ್ಕೆಯಾಗಿದ್ದಾರೆ.

ಅಮೆರಿಕದಾದ್ಯಂತ ಉದ್ಭವಿಸಿರುವ ಕೊರೊನಾ ವೈರಸ್‌ ಬಿಕ್ಕಟ್ಟು ಮತ್ತು ರಾಜಕೀಯದ ಅನಿಶ್ಚಿತತೆ ನಡುವೆ ಪೆಲೊಸಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.

80ರ ಹರೆಯದ ಪೆಲೊಸಿ, 216ರ ಮತಗಳನ್ನು ಪಡೆಯುವ ಮೂಲಕ, ತನ್ನ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಕೆವಿನ್‌ ಮೆಕ್‌ಕಾರ್ತಿ ಅವರ ವಿರುದ್ಧ ವಿಜೇತರಾಗಿದ್ದಾರೆ. ಹೌಸ್ ಕ್ಲರ್ಕ್ ಪ್ರಕಾರ, ಒಟ್ಟು 427 ಮತಗಳು ಚಲಾವಣೆಯಾ ಗಿವೆ. ಒಂದು ಮತ ಸೆನೆಟರ್ ಟಮ್ಮಿ ಡಕ್ವರ್ತ್ ಮತ್ತು ಒಂದು ಮತ ಸಂಸದ ಹಕೀಮ್ ಜೆಫ್ರೀಸ್‌ ಅವರಿಗೆ ಬಿದ್ದಿದೆ.

ADVERTISEMENT

‘117ನೇ ಸಂಸತ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನನ್ನನ್ನು ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಇದು ದೊರೆತಿರುವ ಗೌರವವೆಂದು ಭಾವಿಸುತ್ತೇನೆ. ಜನರಿಗಾಗಿ ನನ್ನ ಕೆಲಸ ಮುಂದುವರಿಯಲಿದೆ ‘ಎಂದು ಪೆಲೊಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.