ADVERTISEMENT

ನೇಪಾಳ: ಮುಖ್ಯ ನ್ಯಾಯಮೂರ್ತಿ ವಿರುದ್ಧ ದೋಷಾರೋಪ

ಪಿಟಿಐ
Published 13 ಫೆಬ್ರುವರಿ 2022, 12:31 IST
Last Updated 13 ಫೆಬ್ರುವರಿ 2022, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ಭ್ರಷ್ಟಾಚಾರದ ಆರೋಪದ ಮೇಲೆ ನೇಪಾಳದ ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಷಂಷೇರ್ ಜೆಬಿ ರಾಣಾ ಅವರ ವಿರುದ್ಧ ಆಡಳಿತಾರೂಢ ಶಾಸಕರು ಭಾನುವಾರ ದೋಷಾರೋಪ ನಿರ್ಣಯ ಮಂಡಿಸಿದ್ದಾರೆ.

ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಣಾ ಅವರ ವಿರುದ್ಧ ದೋಷಾರೋಪ ನಿರ್ಣಯ ಮಂಡಿಸಲಾಗಿದೆ ಎಂದು ಸಂಸತ್ ಸಚಿವಾಲಯದ ವಕ್ತಾರ ರಾಜನಾಥ್ ಪಾಂಡೆ ತಿಳಿಸಿದ್ದಾರೆ.

2019ರ ಜ. 2ರಂದು ರಾಣಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದೋಷಾರೋಪ ಮಂಡನೆಯಾಗುತ್ತಿದ್ದಂತೆಯೇ ಅವರನ್ನು ಅವರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.