ADVERTISEMENT

ಮೋದಿ ಹೇಳಿಕೆಗೆ ಪಾಕ್ ವಾಗ್ದಾಳಿ

ಪಿಟಿಐ
Published 29 ಜನವರಿ 2020, 20:05 IST
Last Updated 29 ಜನವರಿ 2020, 20:05 IST
   

ಇಸ್ಲಾಮಾಬಾದ್: ‘ಯಾವುದೇ ಆಕ್ರಮಣಕಾರಿ ಕ್ರಮವನ್ನು ಪರಿಣಾಮಕಾರಿಯಾಗಿ ತಡೆಯಬೇಕೆಂಬ ಜನರ ಮತ್ತು ದೇಶದ ಸಶಸ್ತ್ರ ಪಡೆಗಳ ಸಂಕಲ್ಪವನ್ನು ಯಾರೇ ಆಗಲಿ ಕೀಳಾಗಿ ಕಾಣಬಾರದು’ ಎಂದು ಬುಧವಾರ ಪಾಕಿಸ್ತಾನ ಹೇಳಿದೆ.

ಭಾರತದ ವಿರುದ್ಧ ಪಾಕಿಸ್ತಾನ ಪರೋಕ್ಷವಾಗಿ ದಾಳಿಗಳನ್ನು ನಡೆಸಿದ್ದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ ಒಂದು ದಿನದ ಬಳಿಕ, ಪಾಕಿಸ್ತಾನ ಈ ಹೇಳಿಕೆ ನೀಡಿದೆ.

ನವದೆಹಲಿಯಲ್ಲಿ ಮಂಗಳವಾರ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ಪಾಕಿಸ್ತಾನ ನೆಲಕಚ್ಚುವಂತೆ ಮಾಡಲು ಭಾರತೀಯ ಸಶಸ್ತ್ರ ಪಡೆಗಳು ಒಂದು ವಾರ ಅಥವಾ 10 ದಿನಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.