ADVERTISEMENT

‘ಚೀನಾ ಲಸಿಕೆಗಳು ಕಡಿಮೆ ಪರಿಣಾಮಕಾರಿ’

ಕಾಯಿಲೆ ನಿಯಂತ್ರಣ ಕೇಂದ್ರದ ನಿರ್ದೇಶಕರ ಹೇಳಿಕೆ

ಏಜೆನ್ಸೀಸ್
Published 11 ಏಪ್ರಿಲ್ 2021, 7:50 IST
Last Updated 11 ಏಪ್ರಿಲ್ 2021, 7:50 IST
.
.   

ಬೀಜಿಂಗ್‌: ಕೋವಿಡ್‌–19 ವಿರುದ್ಧ ನೀಡಲಾಗುವ ಚೀನಾದ ಲಸಿಕೆಗಳ ಸಾಮರ್ಥ್ಯ ಕಡಿಮೆ ಇದೆ ಎಂದು ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

‘ಚೀನಾದ ಲಸಿಕೆಗಳು ಅತಿ ಹೆಚ್ಚಿನ ರಕ್ಷಣಾತ್ಮಕ ಸಾಮರ್ಥ್ಯ ಹೊಂದಿಲ್ಲ. ಈ ಲಸಿಕೆಗಳು ಕಡಿಮೆ ಪರಿಣಾಮಕಾರಿಯಾಗಿವೆ’ ಎಂದು ಚೀನಾದ ಕಾಯಿಲೆ ನಿಯಂತ್ರಣ ಕೇಂದ್ರದ ನಿರ್ದೇಶಕ ಗೌ ಫು ತಿಳಿಸಿದ್ದಾರೆ.

‘ಈಗಿನ ಪರಿಸ್ಥಿತಿಯಲ್ಲಿ ವಿಭಿನ್ನ ಲಸಿಕೆಗಳನ್ನು ಬಳಕೆ ಮಾಡುವ ಬಗ್ಗೆ ಈಗ ಪರಿಶೀಲನೆ ನಡೆಸಲಾಗುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ರಾಷ್ಟ್ರಗಳು ಅಭಿವೃದ್ಧಿಪಡಿಸಿದ ಎಂಆರ್‌ಎನ್‌ಎ ಲಸಿಕೆ ಬಳಕೆ ಬಗ್ಗೆಯೂ ಗೌ ಫು ಪ್ರಸ್ತಾಪಿಸಿದ್ದಾರೆ.

‘ಎಂಆರ್‌ಎನ್‌ಎ ಲಸಿಕೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕಾಗಿದೆ. ಈಗಾಗಲೇ ನಮ್ಮಲ್ಲಿ ಹಲವು ಲಸಿಕೆಗಳಿವೆ ಎಂದು ಭಾವಿಸಿಕೊಂಡು ಇದನ್ನು ಕಡೆಗಣಿಸಬಾರದು’ ಎಂದು ಗೌ ಹೇಳಿದ್ದಾರೆ.

ಚೀನಾದ ಶಿನೊವ್ಯಾಕ್‌ ಅಭಿವೃದ್ಧಿಪಡಿಸಿದ ಲಸಿಕೆ ಶೇಕಡ 50.4ರಷ್ಟು ಮಾತ್ರ ಸೋಂಕು ತಡೆಗಟ್ಟಬಹುದು ಎಂದು ಬ್ರೆಜಿಲ್‌ನ ಸಂಶೋಧಕರು ವಿಶ್ಲೇಷಿಸಿದ್ದಾರೆ. ಇದಕ್ಕೆ ಹೋಲಿಸಿದಾಗ ಫೈಜರ್‌ ಅಭಿವೃದ್ಧಿಪಡಿಸಿದ ಲಸಿಕೆಯು ಶೇಕಡ 97ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ವಿದೇಶಿ ಲಸಿಕೆಗೆ ಚೀನಾ ಇನ್ನೂ ಅನುಮೋದನೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.